Advertisement

Malpe ನರ ಸಂಬಂಧಿ ಕಾಯಿಲೆ; ಬಾಲಕಿ ಸಾವು

12:44 AM Sep 28, 2023 | Team Udayavani |

ಮಲ್ಪೆ: ಮಲ್ಪೆ ಕೊಡವೂರು ಬಳಿಯ ದಾಮೋದರ್‌ ಅವರ ಪುತ್ರಿ ಅಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ದೃಶ್ಯ (12) ನರ ಸಂಬಂಧಿ ಕಾಯಿಲೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ.

Advertisement

ಮಂಗಳವಾರ ರಾತ್ರಿ ಔಷಧ ಸೇವಿಸಿ ಮಲಗಿದ್ದ ಬಾಲಕಿ ಬೆಳಗ್ಗೆ ಮಾತನಾಡದ ಸ್ಥಿತಿಯಲ್ಲಿದ್ದರು. ತತ್‌ಕ್ಷಣ ಉಡುಪಿಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ
ಕುಂದಾಪುರ: ಕಂದಾವರ ಗ್ರಾಮದ ಕಾಡಿನಕೊಂಡ ಬಳಿ ಬೈಕ್‌-ಸ್ಕೂಟರ್‌ ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.ಸುಮೇಶ ಗೋಪಿ ಅವರು ಸ್ಕೂಟರಿನಲ್ಲಿ ರಿûಾವನ್ನು ಹಿಂದಿಕ್ಕಿ ಮುಂದಕ್ಕೆ ಹೋಗುವ ಭರದಲ್ಲಿ ವಿದ್ಯಾಧರ (56) ಅವರ ಬೈಕಿಗೆ ಢಿಕ್ಕಿಯಾಗಿದೆ. ಗಾಯಾಳು ವಿದ್ಯಾಧರ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಂಜಾ ಸೇವನೆ: ಯುವಕ ವಶಕ್ಕೆ
ಮಂಗಳೂರು: ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಯೆಯ್ನಾಡಿಯ ಪ್ರತ್ಯಕ್ಷ (26)ನನ್ನು ಸೆ. 27ರಂದು ಬೆಳಗ್ಗೆ 11.30ಕ್ಕೆ ಲೇಡಿಹಿಲ್‌ ಬಳಿ ಬರ್ಕೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next