Advertisement

ಮಲ್ಪೆ : ದಕ್ಷಿಣ ಭಾಗದ ತೀರದಲ್ಲಿ 5 ವರ್ಷದ ತ್ಯಾಜ್ಯಕ್ಕೆ ಮುಕ್ತಿ

11:49 PM Oct 23, 2019 | sudhir |

ಮಲ್ಪೆ: ಜಾಗತಿಕ ಮಟ್ಟದಲ್ಲೇ ಪ್ರಸಿದ್ಧಿಯನ್ನು ಕಂಡಿರುವ ನೈಸರ್ಗಿಕ ಸೌಂದರ್ಯದ ಮಲ್ಪೆ ಬೀಚ್‌ನ ದಕ್ಷಿಣ ಭಾಗದಲ್ಲಿ ಇಂಟರ್‌ಲಾಕ್‌ ರಸ್ತೆಯ ಸಮೀಪದ ತೀರದುದ್ದಕ್ಕೂ ನಾಲ್ಕೈದು ವರ್ಷದಿಂದ ತ್ಯಾಜ್ಯ ರಾಶಿ ಬಿದ್ದಿದ್ದು ಕೊನೆಗೂ ಈ ತ್ಯಾಜ್ಯಕ್ಕೆ ಮುಕ್ತಿ ದೊರಕಿದಂತಾಗಿದೆ.

Advertisement

ಹಲವಾರು ಸಂಘ ಸಂಸ್ಥೆಗಳು, ಇಲಾಖೆಗಳು ಬೀಚ್‌ನ ಸ್ವತ್ಛತಾ ಕಾರ್ಯ ನಡೆಸುತ್ತಿದ್ದರೂ, ಅದು ಬೀಚ್‌ನ ಕೇಂದ್ರಸ್ಥಾನಕ್ಕೆ ಮಾತ್ರ ಸೀಮಿತವಾಗಿದೆ. ಬೀಚ್‌ ಅಕ್ಕಪಕ್ಕದಲ್ಲಿ ಭಾಗಗಳಲ್ಲಿ ಕಸದ ರಾಶಿ ಹಾಗೆ ಉಳಿದುಕೊಂಡಿರುತ್ತದೆ.

ಬೀಚ್‌ನ ಬಯಲು ರಂಗ ಮಂಟಪದಿಂದ ಕೊಳ ರಾಮಭಜನಾ ಮಂದಿರದವರೆಗಿನ ಇಂಟರ್‌ ರಸ್ತೆಯ ಎರಡೂ ಬದಿ ಸುಮಾರು ಒಂದು ಕಿ.ಮಿ ಉದ್ದಕ್ಕೆ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಕಳೆದ ನಾಲ್ಕೈದು ವರ್ಷದಿಂದ ಈ ಭಾಗ ಸ್ವತ್ಛವಾಗಿಲ್ಲ ಎನ್ನಲಾಗಿದೆ.

ಇಲ್ಲಿನ ನಗರಸಭಾ ಸದಸ್ಯೆ ಲಕೀÒ$¾ ಮಂಜುನಾಥ್‌ ಅವರ ಮುತುವರ್ಜಿಯಲ್ಲಿ ಉಡುಪಿ ನಗರಸಭೆ ಮತ್ತು ಬೀಚ್‌ ನಿರ್ವಹಣಾ ಸಮಿತಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸ್ವತ್ಛತೆ ಅಭಿಯಾನದ ಮೂಲಕ ಕಸ ತೆಗೆಯಲು ಮುಂದಾಗಿದೆ. ಇದುವರೆಗೆ ಸುಮಾರು 15ಟನ್‌ ಕಸವನ್ನು ತೆರವುಗೊಳಿಸಲಾಗಿದೆ. ಇಲ್ಲಿ ಬೀಚ್‌ಗೆ ಬರುವ ಪ್ರವಾಸಿಗರು ಸೇರಿದಂತೆ, ಮಲ್ಪೆ ಬಂದರಿಗೆ ಈ ದಾರಿಯಲ್ಲಿ ಬರುವ ಬೇರೆ ಗ್ರಾಮದ ನಾಗರಿಕರು ಇಲ್ಲಿನ ಕಸವನ್ನು ಎಸೆದು ಹೋಗುತ್ತಾರೆ ಎಂಬ ಆರೋಪವೂ ಇದೆ.

ಇತ್ತೀಚಿನ ದಿನಗಳಲ್ಲಿ ಸ್ವತ್ಛ ಭಾರತ ಅಭಿಯಾನ ಎಂದು ಹೇಳಿಕೊಂಡು ಕೇವಲ ಪ್ರಚಾರಕ್ಕಾಗಿ ಸ್ವತ್ಛತಾ ಅಭಿಯಾನ ನಡೆಸುವುದು ಕೆಲವಡೆ ಕಂಡು ಬರುತ್ತದೆ. ನಗರಸಭೆ ಮತ್ತು ಬೀಚ್‌ ನಿರ್ವಾಹಣಾ ಸಮಿತಿ ಕಳೆದ ನಾಲ್ಕೈದು ವರ್ಷಗಳಿಂದ ತೀರದಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸುತ್ತಿದ್ದು, ಸಮುದ್ರತೀರ ಈಗ ಸುಂದರವಾಗಿ ಕಾಣುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಶರತ್‌ ಕರ್ಕೇರ ಮತ್ತು ಮಂಜು ಕೊಳ.

Advertisement

ಎರಡೂ ಭಾಗದಲ್ಲಿ ಸ್ವತ್ಛತಾ ಕಾರ್ಯ
ನಗರಸಭೆಯ ವತಿಯಿಂದ ಕೊಳ ವಾರ್ಡ್‌ಗೆ ಕಸ ಸಂಗ್ರಹದ ವಾಹನ ಮಂಜೂರು ಆಗಿದೆ. ಇನ್ನು ಮುಂದೆ ವಾರ್ಡ್‌ನ ಜನರು ಕಸವನ್ನು ಎಲ್ಲೆಲ್ಲೂ ಬಿಸಾಡದೇ ಕಸ ಸಂಗ್ರಹಕ್ಕೆ ಬರುವ ವಾಹನಕ್ಕೆ ನೀಡಿ ಸಹಕರಿಸಬೇಕು.ವಿವಿಧ ಸಂಘ ಸಂಸ್ಥೆಗಳಾಗಲಿ, ಸಂಬಂಧಪಟ್ಟ ಇಲಾಖೆಗಳಾಗಲಿ ಕೇವಲ ಬೀಚ್‌ನ ಪ್ರಮುಖ ಭಾಗವನ್ನು ಮಾತ್ರ ಸ್ವತ್ಛಗೊಳಿಸಲು ಮುಂದಾಗದೆ ವಿಶೇಷ ಆಸಕ್ತಿ ವಹಿಸಿ ಬೀಚ್‌ ಎರಡೂ ಭಾಗದಲ್ಲೂ ಸ್ವತ್ಛತೆಯ ಕಾರ್ಯ ನಡೆಸಬೇಕು.

– ಲಕ್ಷ್ಮೀ ಮಂಜುನಾಥ್‌, ನಗರಸಭಾ ಸದಸ್ಯರು, ಕೊಳವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next