ಮಲ್ಪೆ/ಕಾರವಾರ: ನಾಲ್ಕೂವರೆ ತಿಂಗಳುಗಳ ಹಿಂದೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಏಳು ಮೀನುಗಾರರ ಸಹಿತ ನಿಗೂಢವಾಗಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ದೋಣಿಯ ಅವಶೇಷ ಮಹಾರಾಷ್ಟ್ರದ ಮಾಲ್ವಾಣ್ ಬಳಿ ಪತ್ತೆಯಾಗಿದೆ. ಅದು ಮುಳುಗಡೆಯಾಗಿರುವ ಬಗ್ಗೆ ನೌಕಾ ಪಡೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಮಲ್ಪೆ ಬಡಾನಿಡಿಯೂರಿನ ಚಂದ್ರಶೇಖರ್ ಕೋಟ್ಯಾನ್, ದಾಮೋದರ ಸಾಲ್ಯಾನ್, ಉ. ಕ. ಜಿಲ್ಲೆಯ ಲಕ್ಷ್ಮಣ, ರವಿ, ಸತೀಶ್, ಹರೀಶ ಮತ್ತು ರಮೇಶ ಸೇರಿ ಒಟ್ಟು ಏಳು ಮೀನು ಗಾರರು ಬೋಟಿನಲ್ಲಿದ್ದು, ಇವರೆಲ್ಲರೂ ಮೃತಪಟ್ಟಿರಬಹುದೆಂದು ಊಹಿಸಲಾಗಿದೆ. ನೌಕಾಪಡೆ ಇವರ ಸಾವಿನ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.
ಮೀನುಗಾರರ ನೆರವು
ಶಾಸಕ ರಘುಪತಿ ಭಟ್ ಹಾಗೂ 10 ಮಂದಿ ಮೀನುಗಾರರ ತಂಡ ಎ.28ರಿಂದ ಐಎನ್‌ಎಸ್ ನಿರೀಕ್ಷಕ್ ಹಡಗಿನ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಸೋಮವಾರ ಬೆಳಗ್ಗಿನಿಂದ ತೀವ್ರ ಶೋಧ ನಡೆಯಿತು. ಸೋನಾರ್ ತಂತ್ರಜ್ಞಾನದ ಮೂಲಕ ಹುಡುಕಾಟ ನಡೆಸಲಾಗಿತ್ತು. ಜಿಪಿಎಸ್ ಮಾಹಿತಿ ಆಧರಿಸಿ ಬುಧವಾರದ ವರೆಗೂ ಶೋಧ ನಡೆಯಿತು. ಮುಳುಗು ತಜ್ಞರು ಸಮುದ್ರಕ್ಕೆ ಇಳಿದು ಸುಮಾರು 64 ಮೀ. ಆಳದಲ್ಲಿ ಅವಶೇಷಗಳನ್ನು ಪತ್ತೆ ಹಚ್ಚಿದರು. ದೋಣಿಯ ಕ್ಯಾಬಿನ್ ಪೂರ್ಣ ಹಾನಿಯಾಗಿದೆ. ದೋಣಿ ಒಂದು ಬದಿಗೆ ಮಗುಚಿ ಬಿದ್ದ ಸ್ಥಿತಿಯಲ್ಲಿದ್ದು, ‘ಸುವರ್ಣ ತ್ರಿಭುಜ’ ಹೆಸರು ಕಂಡುಬಂದಿದೆ ಎನ್ನಲಾಗಿದೆ. ಖಾತ್ರಿ ಪಡಿಸಲು ಸಮುದ್ರದಾಳದಲ್ಲಿ ವಿಡಿಯೋಗ್ರಫಿ ಮಾಡಲಾಗಿದೆ. ಇದರಿಂದಲೂ ದೋಣಿಯ ಹೆಸರು ಖಚಿತವಾಗಿದೆ. ಮೀನುಗಾರರ ನೆರವಿನಿಂದ ಪತ್ತೆ ಮಾಡಲು ಸಾಧ್ಯವಾಯಿತು ಎನ್ನಲಾಗಿದೆ.
Advertisement
ಮಾಲ್ವಾಣ್ ಬಳಿ ಸುಮಾರು 64 ಮೀ. ಆಳ ಸಮುದ್ರದಲ್ಲಿ ಅವಶೇಷ ಗಳು ಪತ್ತೆಯಾಗಿದ್ದು, ಅವು ಸುವರ್ಣ ತ್ರಿಭುಜದವು ಎಂದು ಐಎನ್‌ಎಸ್ ನಿರೀಕ್ಷಕ್ ಹಡಗಿನ ಮುಳುಗು ತಜ್ಞರು ಖಚಿತಪಡಿಸಿದ್ದಾರೆ. ಭಾರತೀಯ ನೌಕಾಪಡೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೊಬ್ಬರು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
ಶಾಸಕ ರಘುಪತಿ ಭಟ್ ಹಾಗೂ 10 ಮಂದಿ ಮೀನುಗಾರರ ತಂಡ ಎ.28ರಿಂದ ಐಎನ್‌ಎಸ್ ನಿರೀಕ್ಷಕ್ ಹಡಗಿನ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಸೋಮವಾರ ಬೆಳಗ್ಗಿನಿಂದ ತೀವ್ರ ಶೋಧ ನಡೆಯಿತು. ಸೋನಾರ್ ತಂತ್ರಜ್ಞಾನದ ಮೂಲಕ ಹುಡುಕಾಟ ನಡೆಸಲಾಗಿತ್ತು. ಜಿಪಿಎಸ್ ಮಾಹಿತಿ ಆಧರಿಸಿ ಬುಧವಾರದ ವರೆಗೂ ಶೋಧ ನಡೆಯಿತು. ಮುಳುಗು ತಜ್ಞರು ಸಮುದ್ರಕ್ಕೆ ಇಳಿದು ಸುಮಾರು 64 ಮೀ. ಆಳದಲ್ಲಿ ಅವಶೇಷಗಳನ್ನು ಪತ್ತೆ ಹಚ್ಚಿದರು. ದೋಣಿಯ ಕ್ಯಾಬಿನ್ ಪೂರ್ಣ ಹಾನಿಯಾಗಿದೆ. ದೋಣಿ ಒಂದು ಬದಿಗೆ ಮಗುಚಿ ಬಿದ್ದ ಸ್ಥಿತಿಯಲ್ಲಿದ್ದು, ‘ಸುವರ್ಣ ತ್ರಿಭುಜ’ ಹೆಸರು ಕಂಡುಬಂದಿದೆ ಎನ್ನಲಾಗಿದೆ. ಖಾತ್ರಿ ಪಡಿಸಲು ಸಮುದ್ರದಾಳದಲ್ಲಿ ವಿಡಿಯೋಗ್ರಫಿ ಮಾಡಲಾಗಿದೆ. ಇದರಿಂದಲೂ ದೋಣಿಯ ಹೆಸರು ಖಚಿತವಾಗಿದೆ. ಮೀನುಗಾರರ ನೆರವಿನಿಂದ ಪತ್ತೆ ಮಾಡಲು ಸಾಧ್ಯವಾಯಿತು ಎನ್ನಲಾಗಿದೆ.
ಐದು ದಿನ ಸಮುದ್ರದಲ್ಲಿದ್ದ ತಂಡ
ನೌಕಾಪಡೆ ಹಡಗಿನಲ್ಲಿ ಮೀನುಗಾರ ತಂಡದೊಂದಿಗೆ ಶಾಸಕ ರಘುಪತಿ ಭಟ್,ತಂಡೆಲರ ಸಂಘದ ಅಧ್ಯಕ್ಷ ರವಿರಾಜಸುವರ್ಣ, ಕ್ಯಾ| ಜಯಪ್ರಕಾಶ್, ಮೀನುಗಾರರ ಮನೆಯವರಾದ ನಿತ್ಯಾನಂದ ಕೋಟ್ಯಾನ್, ಗಂಗಾಧರ ಸಾಲ್ಯಾನ್, ಕರುಣಾಕರ ಸಾಲ್ಯಾನ್, ದೇವೇಂದ್ರ ಭಟ್ಕಳ, ನಾಗರಾಜ ಭಟ್ಕಳ, ಮೀನುಗಾರಿಕೆ ಸ.ನಿರ್ದೇಶಕ ಚಂದ್ರಶೇಖರ್ ಐದು ದಿನದ ಕಾರ್ಯಾಚರಣೆಯಲ್ಲಿ ಇದ್ದರು. ಅವಘಡದ ಬಗ್ಗೆ ತನಿಖೆಯಾಗಬೇಕು. ರಾಜ್ಯ ಮತ್ತು ಕೇಂದ್ರ ಸರಕಾರದಿಂದ 7 ಮಂದಿ ಮೀನುಗಾರರ ಕುಟುಂಬಗಳಿಗೆ ಗರಿಷ್ಠ ಮೊತ್ತ ಪರಿಹಾರ ಒದಗಿಸಲುಪ್ರಯತ್ನ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ಡಿ. 15ರಂದು ಸಂಪರ್ಕ ಕಡಿದುಕೊಂಡಿತ್ತು
ಮಲ್ಪೆ ಬಂದರಿನಿಂದ ಡಿ.13ರಂದು ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಡಿ.15ರ ತಡರಾತ್ರಿ ಇತರ ದೋಣಿಗಳ ಸಂಪರ್ಕವನ್ನು ಕಳೆದುಕೊಂಡಿತ್ತು. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ತೀರ ಸಮೀಪದಲ್ಲಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿತ್ತು. ಸಾಕಷ್ಟು ಶೋಧನೆ ನಡೆದು ಅವಘಡಕ್ಕೆ ಈಡಾಗಿ ಮುಳುಗಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮಾಲ್ವಾಣ್ ದಡದಲ್ಲಿ ದೋಣಿಯ ಬಾಕ್ಸ್‌ಗಳು ದೊರೆತಿದ್ದವು.
ಮೀನುಗಾರರ ಮನವಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ನಾಪತ್ತೆ ಯಾದ ಮೀನುಗಾರರ ಮನೆಗೆ ಭೇಟಿ ನೀಡಿದ್ದಾಗ ಶೋಧ ಕಾರ್ಯಾಚರಣೆಯಲ್ಲಿ ನಮ್ಮನ್ನೂ ಸೇರಿಸಿಕೊಳ್ಳಬೇಕು ಎಂದು ಮನೆಯವರು ಪಟ್ಟು ಹಿಡಿದಿದ್ದರು. ಚುನಾವಣೆ ಮುಗಿದ ಕೂಡಲೇ ಮೀನುಗಾರರ ಉಪಸ್ಥಿತಿಯಲ್ಲಿ ಶೋಧಕ್ಕೆ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು. ವಿಶಾಖಪಟ್ಟಣದಿಂದ ಐಎನ್‌ಎಸ್ ನಿರೀಕ್ಷಕ್ ನೌಕೆಯನ್ನು ಕಾರವಾರ ಸೀಬರ್ಡ್ ನೌಕಾನೆಲೆಗೆ ಕಳುಹಿಸಿ ಕೊಟ್ಟಿದ್ದರು.
ಪಾರಾಗಿದ್ದರೆ ನಾಲ್ಕೈದು ದಿನಗಳಲ್ಲಿ ಬರಬೇಕಿತ್ತು
ಮಲ್ಪೆ: ಬೋಟಿನಲ್ಲಿದ್ದ ನಮ್ಮವರು ಪಾರಾಗಿದ್ದರೂ ನಾಲ್ಕೈದು ದಿನಗಳಲ್ಲಿ ಮರಳಬೇಕಿತ್ತು. ನಾಲ್ಕೈದು ತಿಂಗಳಾ ದರೂ ಬಾರದೆ ಇರುವುದರಿಂದ ಮೃತಪಟ್ಟಿರುವ ಸಂಶಯ ಕಾಡುತ್ತಿದೆ ಎಂದು ನಾಪತ್ತೆಯಾದ ಚಂದ್ರಶೇಖರ್ ಕೋಟ್ಯಾನ್ ಸಹೋದರ ನಿತ್ಯಾನಂದ ಕೋಟ್ಯಾನ್ ಹೇಳಿದ್ದಾರೆ. ಮೀನುಗಾರರ ಸಂಘ ಪೂರ್ಣ ಸಹಕಾರ ನೀಡಿದೆ. ನನ್ನ ಸಹೋದರ 45 ಲಕ್ಷ ರೂ. ಬ್ಯಾಂಕ್ ಸಾಲ ಮಾಡಿ ಬೋಟು ಖರೀದಿಸಿದ್ದ. ಸಾಲ ಮರುಪಾವತಿ ಬಾಕಿ ಇದೆ. ನಾಪತ್ತೆಯಾದ ಎಲ್ಲರ ಕುಟುಂಬಗಳೂ ಕಷ್ಟದಲ್ಲಿವೆ. ಈ ಎಲ್ಲರಿಗೂ ಸರಕಾರಗಳು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾ