Advertisement

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

01:02 AM May 30, 2024 | Team Udayavani |

ಮಲ್ಪೆ: ಮನೆಯ ಕಪಾಟಿನಲ್ಲಿ ಇಟ್ಟಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಕಾಣೆಯಾಗಿದೆ ಎಂದು ತೆಂಕನಿಡಿಯೂರು ಕೆಳಾರ್ಕಳಬೆಟ್ಟು ಗ್ರಾಮದ ಶಶಿಕಲಾ ಅವರು ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಮೇ 22ರಂದು ಚಿನ್ನವನ್ನು ಕಪಾಟಿನಲ್ಲಿ ಇಟ್ಟಿದ್ದರು. ರಾತ್ರಿ 9 ಗಂಟೆಗೆ ನೋಡುವಾಗ ಕಾಣೆಯಾಗಿತ್ತು. ಈ ಮಧ್ಯೆ ಅದೇ ದಿನ ತನ್ನ ಸೊಸೆ ಚಂದ್ರಕಲಾ ಮತ್ತು ಮೊಮ್ಮಗ ಪುಲಸ್ಯ ಅವರು ಮನೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದರು. ಈ ಬಗ್ಗೆ ಅವರಿಬ್ಬರಲ್ಲಿ ವಿಚಾರಿಸಿದಾಗ ಮೊದಲು ಒಪ್ಪಿಕೊಳ್ಳಲಿಲ್ಲ ಆ ಬಳಿಕ ಚಿನ್ನವನ್ನು ಕೊಡುವುದಾಗಿ ತಿಳಿಸಿ, ಆನಂತರ ನಿರಾಕರಿಸಿದ್ದಾರೆ.

ಈ ಹಿಂದೆಯೂ ಅವರಿಬ್ಬರು ಮನೆಗೆ ಬಂದಾಗ ಕೆಲವು ವಸ್ತುಗಳು ಕಾಣೆಯಾಗಿದ್ದವು. ನಮಗೆ ಈ ಇಬ್ಬರ ಮೇಲೂ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next