Advertisement

Malpe ಹೆಚ್ಚುತ್ತಿದೆ ಶೀತ, ಜ್ವರ,ಗಂಟಲು ನೋವು

10:32 PM Dec 27, 2023 | Team Udayavani |

ಮಲ್ಪೆ: ಬಿರು ಬಿಸಿಲಿನಿಂದಾಗಿ ಹಗಲಲ್ಲಿ ವಿಪರೀತ ಸೆಕೆ, ರಾತ್ರಿ ಚಳಿಯ ಅನುಭವ. ಈ ಹವಾಮಾನದ ವೈಪರೀತ್ಯದಿಂದಾಗಿ ಕೆಲವು ದಿನಗಳಿಂದ ನಗರ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕರ ಮನೆಗಳಲ್ಲಿ ಶೀತ, ನೆಗಡಿ, ಜ್ವರ, ಗಂಟಲು ಸೋಂಕಿನ ಹಾವಳಿ ಕಾಣಿಸಿ ಕೊಂಡಿದ್ದು ಎಲ್ಲ ಆಸ್ಪತ್ರೆ, ಕ್ಲಿನಿಕ್‌ಗಳು ಪ್ರತೀದಿನ ರೋಗಿಗಳಿಂದ ತುಂಬುತ್ತಿವೆ.

Advertisement

ಒಬ್ಬರಿಗೆ ಕಾಣಿಸಿಕೊಳ್ಳುವ ಜ್ವರ ಬಳಿಕ ಕುಟುಂಬದ ಇತರರಿ ಗೂ ಹರಡುತ್ತಿದ್ದು, ನೆಗಡಿ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಎಲ್ಲರಿಗೂ ಹರಡೀತೆಂಬ ಭಯ ಕಾಡತೊಡಗಿದೆ.

ಮಾಸ್ಕ್ ಬಳಕೆ ಉತ್ತಮ
ನವೆಂಬರ್‌, ಡಿಸೆಂಬರ್‌ನಲ್ಲಿ ಚಳಿಯ ಪ್ರಮಾಣ ಹೆಚ್ಚಿರುವುದರಿಂದ ಶೀತ, ಜ್ವರ ಸಾಮಾನ್ಯ. ಇದಕ್ಕೆ ಯಾರೂ ಆತಂಕಪಡುವ ಆವಶ್ಯಕತೆ ಇಲ್ಲ. ಅನಾರೋಗ್ಯ ಉಂಟಾದಾಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆ ಯಿರಿ. ನೆಗಡಿ, ಜ್ವರ ಕಾಣಿಸಿಕೊಂಡಾಗ ಮಾಸ್ಕ್ ಧರಿಸುವ ಮೂಲಕ ಹರಡುವಿಕೆಯನ್ನು ತಡೆಗಟ್ಟಿ ಎನ್ನುತ್ತಾರೆ ಎನ್ನುತ್ತಾರೆ ಮಲ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ| ಜೇಷ್ಮಾ.

ಸಾಮಾನ್ಯವಾಗಿ ಶೀತ – ಜ್ವರ ಬಂದಾಗ ರೋಗಿಗಳು ಐದಾರು ದಿನ ಔಷಧ ಸೇವಿಸುವ ಅನಿವಾರ್ಯತೆ ಕಂಡು ಬರುತ್ತದೆ. ಸೂಕ್ತ ಔಷಧಿ, ವಿಶ್ರಾಂತಿಯೇ ಇದಕ್ಕೆ ಇರುವ ಪರಿಹಾರ. ಹೆಚ್ಚಿನ ದಿನ ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಕಿನ್ನಿಮೂಲ್ಕಿಯ ಡಾ| ಗೀತಾ ರಾವ್‌.

ಹವಾಮಾನ ವೈಪರೀತ್ಯದಿಂದಾಗಿ ಸಾಂಕ್ರಾಮಿಕ ರೋಗ ಲಕ್ಷಣಗಳು ಕಂಡು ಬರುತ್ತಿವೆ. ಆರೋಗ್ಯ ಇಲಾಖೆಯು ಸೂಕ್ತ ಚಿಕಿತ್ಸೆ ನೀಡುತ್ತಿದೆ. ನಿರಂತರವಾಗಿ ಇಂತಹ ರೋಗ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.
– ಡಾ| ಪಿ.ಐ. ಗಡಾದ್‌,
ಜಿಲ್ಲಾ ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next