Advertisement

ಮಲ್ಪೆ  ಬಂದರು ಅಭಿವೃದ್ಧಿ ; ಶೀಘ್ರ ಸರಕಾರಕ್ಕೆ ಪ್ರಸ್ತಾವನೆ

12:49 PM Jun 26, 2018 | |

ಮಲ್ಪೆ: ಮುಂದಿನ ತಿಂಗಳು ರಾಜ್ಯ ಬಜೆಟ್‌ ಮಂಡನೆ ಆಗಲಿದ್ದು, ಮೀನುಗಾರರ ಸಂಘದ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು, ಮುಖಂಡರ ಸಭೆ ಕರೆದು ಚರ್ಚಿಸಿ ಬಂದರಿನ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಕನ್ನಿ ಮೀನುಗಾರರ ಸಂಘದ ನೂತನ ಸಭಾಭವನವನ್ನು ಸೋಮವಾರ ಉದ್ಘಾಟಿಸಿದ ಅವರು, ಮೀನುಗಾರರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು, ಮಲ್ಪೆ ಬಂದರಿನ ಬೇಡಿಕೆಗಳ ಬಗ್ಗೆ ಮನವಿ ಮಾಡಲಾಗುವುದು ಎಂದರು.

ವಿರೋಧ ಬಿಡಿ
ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಪಡುಕರೆ ಭಾಗದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 10 ಕೋ. ರೂ. ಮಂಜೂರಾಗಿದ್ದು, ಕಾಮಗಾರಿಗೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಆದನ್ನು ಸೌಹಾರ್ದದಿಂದ ಬಗೆಹರಿಸಬೇಕಿದೆ. ಮೀನು ಹರಾಜು ಪ್ರಾಂಗಣದ ಛಾವಣಿ ಬದಲಿಸಲು ಹಣ ಮೀಸಲಿಟ್ಟಿದ್ದು, ತಾಂತ್ರಿಕ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಾಸ ಕುಂದರ್‌ ಕಲ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಸೋಮಪ್ಪ ಕಾಂಚನ್‌, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್‌, ಬಡಾನಿಡಿಯೂರು ದುರ್ಗಾಪರಮೇಶ್ವರೀ ದೇವಸ್ಥಾನದ ಗೌರವಾಧ್ಯಕ್ಷ ರಮೇಶ್‌ ಕೋಟ್ಯಾನ್‌, ಆಳಸಮುದ್ರ ಟ್ರಾಲ್‌ಬೋಟ್‌ ಸಂಘದ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ, ಪಸೀನ್‌ ಸಂಘದ ಅಧ್ಯಕ್ಷ ಯಶೋಧರ್‌ ಅಮೀನ್‌, ಅಖೀಲ ಕರ್ನಾಟಕ ಪಸೀನ್‌ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್‌ ಬಂಗೇರ, ಟೆಂಪೋ ಸಂಘದ ಅಧ್ಯಕ್ಷ ಪ್ರಶಾಂತ್‌ ನೇಜಾರು, ಸಣ್ಣ ಟ್ರಾಲ್‌ಬೋಟ್‌ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕಾಂಚನ್‌, ಟ್ರಾಲ್‌ಬೋಟ್‌ ಸಂಘದ ಕಾರ್ಯದರ್ಶಿ ಕೃಷ್ಣ ಜಿ. ಕೋಟ್ಯಾನ್‌, ಕಾರ್ಮಿಕ ಸಂಘದ ಅಧ್ಯಕ್ಷ ರಾಘವ ಜಿ. ಕರ್ಕೇರ, ಡೀಪ್‌ಸೀ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ, ತ್ರಿಸೆವೆಂಟಿ ತಾಂಡೇಲರ ಸಂಘದ ಅಧ್ಯಕ್ಷ ಗಣೇಶ್‌ ಸುವರ್ಣ, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಜಲಜಾ ಎಚ್‌. ಕೋಟ್ಯಾನ್‌, ಹಸಿಮೀನು ಸಂಘದ ಅಧ್ಯಕ್ಷೆ ಬೇಬಿ ಎಚ್‌. ಸಾಲ್ಯಾನ್‌, ಮೀನುಗಾರಿಕಾ ಉಪನಿರ್ದೇಶಕ ಪಿ. ಪಾರ್ಶ್ವನಾಥ್‌, ಸಹಾಯಕ ನಿರ್ದೇಶಕ ಶಿವ ಕುಮಾರ್‌, ಕಿರಣ್‌ ಕುಮಾರ್‌ ಉಪಸ್ಥಿತರಿದ್ದರು.

ಸಮ್ಮಾನ
ಕನ್ನಿ ಸಂಘದ ಗೌರವಾಧ್ಯಕ್ಷ ಸೋಮಪ್ಪ ಕಾಂಚನ್‌, ಸಮಾಜ ಸೇವಕ ರವಿ ಬಂಕೇರಕಟ್ಟ, ಬಂದರಿನ ಸ್ವತ್ಛತಾ ಕಾರ್ಯನಿರ್ವಾಹಕ ಸುಂದರ ಪೂಜಾರಿ, ಬಾಲ ಕಲಾವಿದೆ ತನುಶ್ರೀ ಪಿತ್ರೋಡಿ ಹಾಗೂ ಕಟ್ಟಡ ನಿರ್ಮಾಣದ ಎಂಜಿನಿಯರ್‌ ಸದಾನಂದ ಮೆಂಡನ್‌ ಅವರನ್ನು ಸಮ್ಮಾನಿಸಲಾಯಿತು. ಧನಂಜಯ ಕಾಂಚನ್‌ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರವಿ ಕಾಂಚನ್‌ ಪ್ರಸ್ತಾವಿಸಿದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ, ವಂದಿಸಿದರು.

Advertisement

ಮಾಹಿತಿ ಬಯಸಿ ಸಚಿವರ ಮನವಿ
ಮೀನುಗಾರಿಕೆ ಸಚಿವ ನಾಡಗೌಡರು ಕರೆ ಮಾಡಿ ನನಗೆ ಮೀನುಗಾರಿಕೆ ಬಗ್ಗೆ ಮಾಹಿತಿ ಕೊಡಿ ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿಗೆ ತೆರಳಿ ಮೀನುಗಾರಿಕೆಯ ಸಮಗ್ರ ಚಿತ್ರಣ ನೀಡಲಾಗುವುದು. ಮೀನುಗಾರರ ಬೇಡಿಕೆ, ಕುಂದು ಕೊರತೆಗಳ ಬಗ್ಗೆ ಸಚಿವ ಮತ್ತು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ.
 – ಪ್ರಮೋದ್‌ ಮಧ್ವರಾಜ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next