Advertisement

ಮಲ್ಪೆ ಮೀನುಗಾರರ ಸಂಘ ಹವನಿಯಂತ್ರಿತ ಹಾಲ್‌, ಜನರೇಟರ್‌ ಉದ್ಘಾಟನೆ

01:35 AM Jul 11, 2017 | Team Udayavani |

ಮಲ್ಪೆ: ಮಲ್ಪೆ ಮೀನುಗಾರ ಸಂಘದ ಸಮುದಾಯ ಭವನಕ್ಕೆ ನೂತನವಾಗಿ ಅಳವಡಿಸಲಾದ ಹವನಿಯಂತ್ರಣ ಹಾಗೂ ನೂತನ ಜನರೇಟರನ್ನು ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಈ ಸಂದರ್ಭದಲ್ಲಿ ಮೀನುಗಾರ ಸಂಘದ ಮುಖಾಂತರ ಬಂದರುಗಳ ಅಭಿವೃದ್ದಿ ಮತ್ತು ಮೀನುಗಾರರ ಸಮಸ್ಯೆಗಳ ಬಗ್ಗೆ ವಿವಿಧ ಬೇಡಿಕೆಗಳಿಗೆ ಸಚಿವರ ಮುಂದಿರಿಸಿ ಮನವಿ ಮಾಡಿದರು.

ಅಧ್ಯಕ್ಷತೆಯನ್ನು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು ವಹಿಸಿದ್ದರು.

ಮೀನುಗಾರ ಸಂಘದ ಉಪಾಧ್ಯಕ್ಷ ರಮೇಶ್‌ ಕೋಟ್ಯಾನ್‌, ಸಂತೋಷ್‌ ಎಸ್‌. ಸಾಲ್ಯಾನ್‌,  ಕೋಶಾಧಿಕಾರಿ ಸುರೇಶ್‌ ಕುಂದರ್‌, ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್‌, ಆಳಸಮುದ್ರ ಬೋಟ್‌ ಮಾಲಕರ ಸಂಘದ ಅಧ್ಯಕ್ಷ ವಿಠಲ ಕರ್ಕೇರ, ಪಸೀìನ್‌ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್‌, ಕಾರ್ಮಿಕ ಸಂಘದ ಅಧ್ಯಕ್ಷ ರಾಘವ ಜಿ. ಕೆ., ಕನ್ನಿಪಾರ್ಟಿ ಅಧ್ಯಕ್ಷ ದಾಸ ಕುಂದರ್‌,  ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಮಹಿಳಾ ಮೀನುಗಾರ ಸಂಘದ ಅಧ್ಯಕ್ಷೆ ಜಲಜ ಕೋಟ್ಯಾನ್‌, ಸಣ್ಣಟ್ರಾಲ್‌ ಬೋಟ್‌ ಅಧ್ಯಕ್ಷ  ಹರಿಶ್ಚಂದ್ರ ಕಾಂಚನ್‌, ಸಣ್ಣಟ್ರಾಲ್‌ ದೋಣಿ ಮೀನುಗಾರರ (ತ್ರಿಸೆವೆಂಟಿ)ಅಧಕ್ಷ ಕಿಶೋರ್‌ ಪಡುಕರೆ , ತಾಂಡೇಲರ ಸಂಘದ ಅಧ್ಯಕ್ಷ  ರವಿ ಸುವರ್ಣ, ಕೋಟ ಪಸೀìನ್‌ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕ್ಯಾ.ಕೃಷ್ಣಪ್ಪ ಮರಕಾಲ, ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ಟಿ. ಕಾಂಚನ್‌, ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ. ಸುವರ್ಣ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ರತ್ನಾಕರ ಸಾಲ್ಯಾನ್‌  ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next