Advertisement
ಮಲ್ಪೆ ಬೀಚ್‌ಗೆ ನಾಲ್ಕು ದಿನಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶುಕ್ರವಾರ ವಿಜಯ ದಶಮಿಯಂದು ಬೆಳಗ್ಗಿನಿಂದಲೇ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ನೂರಾರು ವಾಹನಗಳು ಆಗಮಿಸುತ್ತಿವೆ. ಬೆಳಗ್ಗಿನಿಂದಲೇ ಜನದಟ್ಟಣೆ ಕಂಡು ಬರುತ್ತಿದ್ದು, ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿದೆ.
ಪ್ರವಾಸಿಗರು ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿತ್ತು. ಪ್ರವಾಸಿ ಮತ್ತು ಸ್ಥಳೀಯ ವಾಹನಗಳ ದಟ್ಟಣೆಯಿಂದಾಗಿ ಮಲ್ಪೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳಿಂದ ಸಂಜೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಶುಕ್ರವಾರ ಸಂಜೆ ಸಮಸ್ಯೆ ತೀವ್ರವಾಗಿತ್ತು. ಬೀಚ್‌ನ ಪಾರ್ಕಿಂಗ್ ಏರಿಯಾ ಭರ್ತಿಯಾಗಿ, ಕಡಲತೀರ ಇಂಟರ್‌ಲಾಕ್ ರಸ್ತೆಯಲ್ಲಿ ಬಾಲಕರ ರಾಮ ಭಜನಾ ಮಂದಿರದ ವರೆಗೆ ವಾಹನಗಳ ಸಾಲು ಕಂಡು ಬಂದಿದೆ. ದಕ್ಷಿಣ ಕನ್ನಡದ ಉಳ್ಳಾಲ, ಸೋಮೇಶ್ವರ, ಪಣಂಬೂರು, ಚಿತ್ರಾಪುರ, ಉಡುಪಿಯ ಕಾಪು, ಮರವಂತೆ ತ್ರಾಸಿ ಬೀಚ್‌ಗಳಲ್ಲಿಯೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿದ್ದರು.