Advertisement

ಮಲ್ಪೆ ಬೀಚ್‌ ಸ್ತಬ್ಧ, ಬೋಟಿಂಗ್‌, ಜಲಸಾಹಸ ಕ್ರೀಡೆಗಳು ಸ್ಥಗಿತ

01:52 AM Mar 20, 2020 | Sriram |

ಮಲ್ಪೆ: ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಕೋವಿಡ್‌ 19 ಭೀತಿ ಎದುರಾಗಿದ್ದು, ಇದೀಗ ಪ್ರವಾಸಿಗರಿಲ್ಲದೆ ಮಲ್ಪೆ ಬೀಚ್‌ ಸ್ತಬ್ಧಗೊಂಡಿದೆ. ಕಳೆದ ಒಂದು ವಾರದಿಂದ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ ಗೊಳ್ಳುತ್ತಾ ಬಂದಿತ್ತು. ಪ್ರತೀ ದಿನ ಮುಂಜಾನೆ 5ಗಂಟೆಗೆ ಸರಾಸರಿ 200ಕ್ಕೂ ಹೆಚ್ಚು ಮಂದಿ ಸ್ಥಳೀಯರು ಬೀಚ್‌ ಕಡೆಗೆ ವಾಕಿಂಗ್‌ ಬರುತಿದ್ದರು. ಇದೀಗ ಕೋವಿಡ್‌ 19 ಭೀತಿಯಿಂದಾಗಿ ಮೂರ್‍ನಾಲ್ಕು ದಿನದಿಂದ ಜನರು ವಾಂಕಿಂಗ್‌ ಬರುವುದು ನಿಲ್ಲಿಸಿದ್ದಾರೆ.

Advertisement

ಸ್ಪೀಡ್ ಬೋಟ್‌ ಯಾನವೂ ರದ್ದು
ಮಲ್ಪೆ ಬೀಚ್‌ನಿಂದ ಸೈಂಟ್‌ ಮೇರಿ ಐಲ್ಯಾಂಡ್‌ಗೆ ಕರೆದುಕೊಂಡು ಹೋಗುವ ಸ್ಪೀಡ್ ಬೋಟ್‌ಗಳ ಯಾನ ಸ್ಥಗಿತಗೊಂಡಿವೆ. ರೌಂಡ್ಸ್‌ ಬರುವ ಬೋಟ್‌ ಸೇವೆಯೂ ಇಲ್ಲ. ಜಲಸಾಹಸ ಕ್ರೀಡೆಗಳಾದ ಪ್ಯಾರಾ ಸೈಲಿಂಗ್‌, ಜೆಟ್‌ಸ್ಕಿ, ಬನಾನಾ ರ್ಯಾಪಿಂಗ್‌, ಝೋರ್ಬಿಂಗ್‌, ಕಯಾಕಿಂಗ್‌, ಸ್ಟೆಂಡ್‌ ಅಪ್‌ ಪೆಡಲ್‌, ಇನ್ನಿತರ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮಲ್ಪೆ ಬೀಚ್‌ ಅಭಿವೃದ್ದಿ ಸಮಿತಿಯ ವತಿಯಿಂದ ಮಲ್ಪೆ ಬೀಚ್‌ ಆಯೋಜಿಸಲಾಗಿದ್ದ ಮಾ. 22ರ ನೃತ್ಯ ಸಂಗೀತ ಕಾರ್ಯಕ್ರಮ ಮತ್ತು ಮಾ. 29ರ ಮಣಿಪಾಲದ ಟಾಪ್ನಿ ಸಂಸ್ಥೆ ಆರ್ಥಿಕ ಸಂವಾದವನ್ನು ರದ್ದು ಪಡಿಸಲಾಗಿದೆ.

ನಾಳೆಯಿಂದ ಬೀಚ್‌ ಕ್ಲೀನಿಂಗ್‌
ಜನರ ಆರೋಗ್ಯದ ದೃಷ್ಟಿಯಿಂದ ನಗರಸಭೆಯ ಆರೋಗ್ಯ ಅಧಿಕಾರಿಗಳ ಸಹಕಾರದಲ್ಲಿ ಅಭಿವೃದ್ಧಿ ಸಮಿತಿಯ ವತಿಯಿಂದ ಮಲ್ಪೆ ಬೀಚ್‌ನಿಂದ ಸೀವಾಕ್‌ ವರೆಗೆ ಶುಕ್ರವಾರದಿಂದ ಶುಚಿತ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬೀಚ್‌ನ ಇಂಟರ್‌ಲಾಕ್‌ ರಸ್ತೆ, ಗಾಂಧಿ ಕಟ್ಟೆ , ಪಾರ್ಕಿಂಗ್‌ ಏರಿಯಾವನ್ನು ಸ್ವತ್ಛಗೊಳಿಸಲಾಗುತ್ತದೆ.

ಜನ ಜಾಗೃತಿ ಮೂಡಿಸಲಾಗುತ್ತದೆ
ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಜಾಗೃತಿಯನ್ನು ಮೂಡಿಸಿ, ಹಿಂದಕ್ಕೆ ಕಳುಹಿಸಲಾಗುತ್ತದೆ. ಇದಕ್ಕಾಗಿ ಜೀವರಕ್ಷಕ ತಂಡದವರನ್ನು ನೇಮಿಸಲಾಗಿದ್ದು ಅವರು ಮಾಹಿತಿಯನ್ನು ನೀಡುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಕೇಳಿದವರಿಗೂ ಬರಬೇಡಿ ಎನ್ನುತ್ತಿದ್ದೇವೆ.
-ಸುದೇಶ್‌ ಶೆಟ್ಟಿ, ನಿರ್ವಾಹಕರು, ಬೀಚ್‌ ಅಭಿವೃದ್ದಿ ಸಮಿತಿ

Advertisement

ತಾತ್ಕಾಲಿಕವಾಗಿ ಸ್ಥಗಿತ
ಜನರ ಆರೋಗ್ಯ ಹಿತದೃಷ್ಟಿಯಿಂದ ಮುಂಜಾಗೃತೆ ಕ್ರಮವಾಗಿ ಈಗಾಗಲೇ ಬೀಚ್‌ನಲ್ಲಿರುವ ಸ್ಪೀಡ್ ಬೋಟ್‌ ಸೇವೆಯನ್ನು ಬುಧವಾರದಿಂದ ತಾತ್ಕಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಮುಂದೆ ಜಿಲ್ಲಾಧಿಕಾರಿಗಳ ಆದೇಶದ ಬಂದ ಅನಂತರ ಆರಂಭಗೊಳಿಸಲಾಗುವುದು.
-ಸನತ್‌ ಸಾಲ್ಯಾನ್‌, ಟೂರಿಸ್ಟ್‌ ಸ್ಪೀಡ್ ಬೋಟ್‌ ನಿರ್ವಾಹಕರು

Advertisement

Udayavani is now on Telegram. Click here to join our channel and stay updated with the latest news.

Next