Advertisement

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

04:10 PM Oct 06, 2024 | Team Udayavani |

ಮಲ್ಪೆ: ಪ್ರವಾಸಿಗರ ಆಕರ್ಷಣೀಯ ವಿಹಾರ ತಾಣಗಳಲ್ಲೊಂದಾದ ಮಲ್ಪೆ ಬೀಚ್‌ ಇದೀಗ ಪ್ರವಾಸಿಗರಿಗೆ ಸಂಪೂರ್ಣವಾಗಿ ತೆರದು ಕೊಂಡಿದ್ದು ಜತೆಗೆ ವಾಟರ್‌ ಸ್ಪೋರ್ಟ್ಸ್ ಕೂಡ ಆರಂಭಗೊಂಡಿದೆ. ಜಿಲ್ಲಾಡಳಿತ ಅ. 1ರಿಂದ ವಾಟರ್‌ ಸ್ಪೋರ್ಟ್ಸ್
ನಡೆಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಅವಕಾಶ ನೀಡಿದ್ದು ಅ. 3ರಿಂದ ಆರಂಭಿಸಲಾಗಿದೆ.

Advertisement

ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯ ದಂತೆ ಹಾಕಲಾಗಿದ್ದ ತಡೆಬೇಲಿಯನ್ನು ಬುಧವಾರ ತೆರವುಗೊಳಿಸಲಾಗಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಮುಂಜಾಗೃತಾ ಕ್ರಮವಾಗಿ ಪ್ರತಿವರ್ಷ (ಮೇ 15ರಿಂದ ಸೆ. 14ರವರೆಗೆ) ಮಳೆಗಾಲದಲ್ಲಿ ಬೀಚ್‌ನ ಉದ್ದಕ್ಕೂ ರಿಫ್ಲೆಕ್ಟೆಡ್‌ ಪಟ್ಟಿ ಮತ್ತು ಫಿಶ್‌ನೆಟ್‌ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ವಾತಾವರಣದ ಅಸಮತೋಲನದಿಂದಾಗಿ ಇದುವರೆಗೆ ತೆರವಿಗೆ ಅಡ್ಡಿಯಾಗಿತ್ತೆನ್ನಲಾಗಿದೆ.

ನವರಾತ್ರಿಯ ಹಿನ್ನಲೆಯಲ್ಲಿ ಎಲ್ಲ ಶಾಲಾ ಕಾಲೇಜಿಗೆ ರಜೆಯಿದ್ದು, ಮನೆ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತಿದ್ದಾರೆ. ಉಡುಪಿಗೆ ಬಂದವರು ಮಲ್ಪೆ ಬೀಚ್‌ಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ವೀಕೆಂಡ್‌ನ‌ಲ್ಲಿ ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಹೊರರಾಜ್ಯಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಬೀಚ್‌ಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ಸಂಜೆ ವೇಳೆಗೆ ಸ್ಥಳೀಯರು ವಿಹಾರಕ್ಕೆ ಬರುವುದರಿಂದ ಜನಸಂದಣಿ ಹೆಚ್ಚಾಗುತ್ತಿದೆ. ವೀಕೆಂಡ್‌ಗಳಲ್ಲಿ ಪಾರ್ಕಿಂಗ್‌ ಏರಿಯಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗುತ್ತಿದೆ.

ಏನೆಲ್ಲ ಜಲಸಾಹಸ ಕ್ರೀಡೆಗಳಿವೆ ಬೀಚ್‌ ವಾಟರ್‌ ಸ್ಪೋರ್ಟ್ಸ್
ಗುರವಾರದಿಂದ ಮತ್ತೆ ಆರಂಭಗೊಂಡಿದ್ದರಿಂದ ಸಾಹಸ ಪ್ರಿಯ ಪ್ರವಾಸಿಗರು ಅದರ ಮಜಾ ಅನುಭವಿಸುತ್ತಿದ್ದಾರೆ. ಸೈಂಟ್‌
ಮೇರಿಸ್‌ಗೆ ತೆರಳುವ ಸೀ³ಡ್‌ ಬೋಟ್‌, ಜತೆಗೆ ಜಲಸಾಹಸ ಕ್ರೀಡೆಗಳಗಾ ಪ್ಯಾರಾ ಸೈಲಿಂಗ್‌, ಜೆಟ್‌ಸ್ಕೀ, ಬನಾನ ಬೋಟ್‌ ರೈಡ್‌,, ಬಂಪಿ ರೈಡಿಂಗ್‌, ಡಿಸ್ಕೋ ಬೋಟ್‌ ರಡ್‌, ಝೋರ್ಬಿಂಗ್‌, ಬೋಟಿಂಗ್‌ ಮಜಾ, ಇಂದಿನಿಂದ ಆರಂಭಗೊಳಿಸಲಾಗಿದ್ದು ಉಳಿದ ಸಾಹಸ ಕ್ರೀಡೆಗಳು ಒಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ ಎನ್ನಲಾಗಿದೆ.

ಜಲಸಾಹಸ ಕ್ರೀಡೆಗೆ ಅವಕಾಶ
ಅ.1ರಿಂದ ವಾಟರ್‌ ಸ್ಪೋರ್ಟ್ಸ್ ಆವಕಾಶ ನೀಡಲಾಗಿದೆ. ಪ್ರವಾಸಿಗರ ಸುರಕ್ಷೆಗೆ ನಿರಂತರ ಗಸ್ತು ತಿರುಗಲು ಎವಿಟಿ ಬೈಕ್‌, ಪ್ರಮಾಣೀಕೃತ ಲೈಫ್‌ಗಾರ್ಡ್‌, ಕರಾವಳಿ ಕಾವಲು ಪೊಲೀಸರು, ಹೋಮ್‌ಗಾರ್ಡ್‌ ನಿಯೋಜಿಸಲಾಗಿದೆ. ಅಲ್ಲದೆ ಜಲಸಾಹಸ ಕ್ರೀಡೆಯಲ್ಲೂ ಜೀವರಕ್ಷಕರು ಇದ್ದಾರೆ. ಜತೆಗೆ ಇನ್ನಿತರ ಸುರಕ್ಷಾ ಕ್ರಮ ಅಳವಡಿಸಲಾಗಿದೆ.
-ಡಾ| ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ

Advertisement

ಹೆಚ್ಚುವರಿ ಶೌಚಾಲಯ ಬೇಕು
ಪ್ರಸ್ತುತ ಮಲ್ಪೆ ಬೀಚ್‌ ಉತ್ತರ ಭಾಗದಲ್ಲಿ ಒಂದು, ದಕ್ಷಿಣ ಭಾಗದಲ್ಲಿ ಒಂದು, ಒಟ್ಟು ಎರಡು ಸುಸಜ್ಜಿತವಾದ ಶೌಚಾಲಯಗಳು ಮತ್ತು ಸ್ನಾನಗೃಹಗಳು ಇದ್ದರೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಗೆ ಪೂರಕವಾಗಿ ಈಗಿರುವ ಶೌಚಾಲಯ ಸಾಲದಾಗಿದೆ. ಇದರಿಂದಾಗಿ ಪ್ರವಾಸಿಗರು ಗಂಟೆ ಗಟ್ಟಲೆ ಶೌಚಾಲಯದ ಮುಂದೆ ಕಾಯುವ ಪರಿಸ್ಥಿತಿ ಇದೆ. ಹೆಚ್ಚುವರಿ ಶೌಚಾಲಯ ನಿರ್ಮಿಸುವ ಅವಶ್ಯಕತೆ ಇದೆ.

ಒಮ್ಮಲೆ ಮಳೆ ಸುರಿದಾಗ ತತ್‌ಕ್ಷಣ ಮಳೆಯಿಂದ ರಕ್ಷಣೆ ಪಡೆಯಲು ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಈ ಭಾಗದಲ್ಲಿ ಮಳೆಯ ರಕ್ಷಣೆಗೆ ನಿಲ್ಲಲು ಸೂಕ್ತ ಶೆಲ್ಟರ್‌ನ್ನು ನಿರ್ಮಿಸ ಬೇಕೆಂಬುದು ಸ್ಥಳೀಯ ವಿಹಾರಾರ್ಥಿಗಳ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next