Advertisement

ಮಕ್ಕಳ ಸಾವು ಅಪೌಷ್ಟಿಕತೆಯಿಂದ, ವ್ಯವಸ್ಥೆಯಿಂದಲ್ಲ; ಡಾ. ಸುಧಾಕರ್ ಸ್ಪಷ್ಟನೆ

01:24 PM Dec 27, 2021 | Team Udayavani |

ಬೆಂಗಳೂರು : ವ್ಯವಸ್ಥೆ ಮಕ್ಕಳ ಸಾವಿಗೆ ಕಾರಣವಾಗಿಲ್ಲ, ಅಪೌಷ್ಟಿಕತೆ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಬಳ್ಳಾರಿ ಮತ್ತು ಹೊಸಪೇಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಸಾವನ್ನಪ್ಪುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ೩೫೮ ಜನ ಮಕ್ಕಳು ಒಂದು ಜಿಲ್ಲೆಯಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅನಿಮಿಯಾ , ಹುಟ್ಟುವ ಮಗುವಿನಲ್ಲಿ ಕಡಿಮೆ ತೂಕ ಮಕ್ಕಳ ಸಾವಿಗೆ ಕಾರಣವಾಗಿದೆ. ರಾಯಚೂರು, ಬಳ್ಳಾರಿ, ಹೊಸ ಪೇಟೆ , ಬೀದರ್ , ಕಲಬುರಗಿ ಸೇರಿ ಆರೇಳು ಜಿಲ್ಲೆಗಳನ್ನು ಪತ್ತೆ ಮಾಡಿದ್ದು, ಎಂಎ ಆರ್, ಐಎಂಆರ್ ಕರ್ನಾಟಕದ್ದು ಇಡೀ ದೇಶದಲ್ಲಿ ಚೆನ್ನಾಗಿದೆ. ಪ್ಯಾರಾಮೀಟರ್ಸ್ ಕಡಿಮೆ ಇರುವುದರಿಂದ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜೊತೆ ವಿಷಯ ವಿನಿಮಯ ಮಾಡಿಕೊಂಡಿದ್ದೇವೆ ಎಂದರು.

ಬಳ್ಳಾರಿಯಲ್ಲಿ ಸೂಪರ್ ಸ್ಪೆಸಿಯಾಲಿಟಿ ಆಸ್ಪತ್ರೆ ಕೂಡ ಇದೆ. ಸಮಸ್ಯೆ ದಶಕಗಳಿಂದ ಬಂದಿದೆ. ಅಪೌಷ್ಟಿಕತೆ ದೂರವಾದರೆ ಸಮಸ್ಯೆ ಸ್ವಾಭಾವಿಕವಾಗಿ ಸರಿ ಹೋಗುತ್ತದೆ. 600 ಗ್ರಾಮ್ 700 ಗ್ರಾಮ್ ತೂಕದಲ್ಲಿ ಮಕ್ಕಳು ಹುಟ್ಟುತ್ತಾರೆ, ದೀರ್ಘಕಾಲಿಕ ಸಮಸ್ಯೆ ಇದಾಗಿದ್ದು ಅಪೌಷ್ಟಿಕತೆ ನಿವಾರಣೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂದರು.

ಕೆಲ ಜಿಲ್ಲೆಗಳಲ್ಲಿ ಮಕ್ಕಳ ಸಾವಿನ ಪ್ರಮಾಣದ ಸರಾಸರಿ ಹೆಚ್ಚು ಕಾಣಿಸುತ್ತಿದೆ, ನಿಯಂತ್ರಿಸಲು ಸರಕಾರ ವಿಶೇಷ ಒತ್ತು ಕೊಡುತ್ತಿದೆ. ಡಿ ಹೆಚ್ ಓ ಕಡೆಯಿಂದ ಮಾಹಿತಿ ಪಡೆದಿದ್ದೇವೆ. ಅಪೌಷ್ಟಿಕತೆ ನಿವಾರಣೆ ನಮ್ಮ ಆದ್ಯ ಕರ್ತವ್ಯ ಎಂದರು.

ನೈಟ್ ಕರ್ಫ್ಯೂ ಜನರ ಒಳಿತಿಗಾಗಿ, ನಮ್ಮ ಸಂತೋಷಕ್ಕಲ್ಲ

Advertisement

ನೈಟ್ ಕರ್ಫ್ಯೂ ಹೇರಿರುವುದು ಸರಕಾರಕ್ಕೆ, ನಮಗೆ ಸಂತೋಷ ತರುವುದಿಲ್ಲ ಜನರ ಒಳಿತಿಗಾಗಿ ತಾಂತ್ರಿಕ ಸಮಿತಿಯ ಸಲಹೆಯ ಮೇರೆಗೆ ಈ ನಿರ್ಧಾರ ಮಾಡಿದ್ದೇವೆ. ಎಲ್ಲರೂ ಸಹಕರಿಸಿ, ಸಮಸ್ತ ಕರ್ನಾಟಕದ ಜನತೆಯ ಸುರಕ್ಷತೆಯ ನಿಟ್ಟಿನಲ್ಲಿ 10 ದಿನಕ್ಕೆ ಮಾಡಿದ್ದೇವೆ.10 ರಿಂದ 15 ದಿನದ ಸೈಕಲ್ ಇದಾಗಿದ್ದು , ಒಂದು ಸೈಕಲ್ ನೋಡಿ ಎಲ್ಲವನ್ನೂ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸೋಂಕಿನ ಸಂಖ್ಯೆ ಹೆಚ್ಚಾದಾಗ ಸ್ವಾಭಾವಿಕವಾಗಿ, ಮೂಲಭೂತ ಸೌಕರ್ಯಗಳ ಮೇಲೆ, ಆಸ್ಪತ್ರೆಗಳ ಮೇಲೆ ಒತ್ತಡ ಬೀರುತ್ತದೆ. ಇದನ್ನು ತಪ್ಪಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next