Advertisement

ಮಲ್ಯ, ಲಲಿತ್‌ ಗಡಿಪಾರು: ಭಾರತ, ಬ್ರಿಟನ್‌ ಚರ್ಚೆ

03:45 AM Jul 19, 2017 | Team Udayavani |

ಲಂಡನ್‌: ಭಾರತದಿಂದ ಬ್ರಿಟನ್‌ಗೆ ಪಲಾಯನಗೈದಿರುವವರು, ವಿದ್ಯಾರ್ಥಿಗಳೂ ಸೇರಿದಂತೆ ಭಾರತೀಯರಿಗೆ ವೀಸಾ ನೀಡಿಕೆಯಲ್ಲಿ ವಿಳಂಬದ ಬಗ್ಗೆ ಭಾರತೀಯ ಅಧಿಕಾರಿಗಳು ಬ್ರಿಟಿಷ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬಹುಕೋಟಿ ರೂಪಾಯಿ ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ, ಐಪಿಎಲ್‌ ಭ್ರಷ್ಟಾಚಾರ ಆರೋಪಿ ಲಲಿಲಿತ್‌ ಮೋದಿ ಅವರ ಗಡೀಪಾರು ಪ್ರಯತ್ನಗಳನ್ನು ಭಾರತ ನಡೆಸುತ್ತಿರುವಂತೆಯೇ, ಈ ಚರ್ಚೆ ಮಹತ್ವ ಪಡೆದಿದೆ. 

Advertisement

ಸೋಮವಾರ ಮಾತುಕತೆ ವೇಳೆ ಬ್ರಿಟನ್‌ ಪ್ರವಾಸದಲ್ಲಿ ರುವ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಮಹರ್ಷಿ ಬ್ರಿಟಿಷ್‌ ಅಧಿಕಾರಿಗಳೊಂದಿಗೆ ಈ ವಿಚಾರ ಪ್ರಸ್ತಾವಿಸಿದ್ದಾರೆ. ಮಲ್ಯ ಪ್ರಕರಣವನ್ನು ವಿಶೇಷವಾಗಿ ಪ್ರಸ್ತಾವಿಸಲಾಗಿದೆಯೇ ಎಂಬ ಮಾಧ್ಯಮದ ಮಂದಿ ಪ್ರಶ್ನೆಗೆ ಉತ್ತರಿಸಿದ ಮಹರ್ಷಿ, ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡ ಲಾಗಿದೆ. ಮಲ್ಯ ಪ್ರಕರಣ ಕೋರ್ಟ್‌ನಲ್ಲಿದ್ದು, ಸಾಮಾನ್ಯವಾಗಿ ಗಡಿಪಾರು ಪ್ರಕರಣಗಳಲ್ಲಿ ಉದ್ಭವವಾಗುವ ಸಮಸ್ಯೆಗಳ ಬಗ್ಗೆ ಪ್ರಸ್ತಾವಿಸಲಾಗಿದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next