Advertisement

ಮಲ್ಯ ಅಕ್ರಮ ಸೂಚಿಸಿದ್ದು ಇಂಗ್ಲೆಂಡ್‌!

06:00 AM Sep 20, 2018 | Team Udayavani |

ಹೊಸದಿಲ್ಲಿ: ಉದ್ಯಮಿ  ವಿಜಯ್‌ ಮಲ್ಯ 170 ಕೋಟಿ ರೂ. ಮೊತ್ತವನ್ನು ಸ್ವಿಸ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದನ್ನು ಮೊದಲು ಗುರುತಿಸಿ ಎಚ್ಚರಿಕೆ ನೀಡಿದ್ದೇ ಇಂಗ್ಲೆಂಡ್‌ನ‌ ಅಧಿಕಾರಿಗಳು ಎಂಬುದು ಇದೀಗ ಬೆಳಕಿಗೆ ಬಂದಿದೆ. ಈ ನಂತರದಲ್ಲೇ ಮಲ್ಯಗೆ ಸಾಲ ನೀಡಿದ್ದ 13 ಬ್ಯಾಂಕ್‌ಗಳು ಒಟ್ಟಾಗಿ ಮಲ್ಯ ವಿರುದ್ದ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದವು. 2017 ಜೂನ್‌ 28 ರಂದು ಭಾರತೀಯ ತನಿಖಾ ಸಂಸ್ಥೆಗಳಿಗೆ ಇಂಗ್ಲೆಂಡ್‌ನ‌ ಫೈನಾನ್ಸಿಯಲ್‌ ಇಂಟಲಿಜೆನ್ಸ್‌ ಯುನಿಟ್‌ ಎಚ್ಚರಿಕೆ ನೀಡಿತ್ತು. ಬಳಿಕ  13 ಬ್ಯಾಂಕ್‌ಗಳು ಒಟ್ಟಾಗಿ ಇಂಗ್ಲೆಂಡ್‌ನ‌ಲ್ಲಿರುವ ಮಲ್ಯ ಸ್ವತ್ತುಗಳನ್ನು ಜಪ್ತಿ ಮಾಡಲು ನಿರ್ಧರಿಸಿದ್ದವು. ಅದಕ್ಕೂ ಮೊದಲು 2015ರಲ್ಲಿ, ಸಿಬಿಐ ಹೊರಡಿಸಿದ ಸುತ್ತೋಲೆಯ ಪ್ರಕಾರ ಲಂಡನ್‌ನಿಂದ ದೆಹಲಿಗೆ ಮಲ್ಯ ಆಗಮಿಸಿದಾಗ ಬಂಧಿಸಬಾರದು ಎಂದು ಆದೇಶಿಸಿತ್ತು. ನಾಲ್ಕು ತಿಂಗಳ ನಂತರ ಕಾನೂನು ಕ್ರಮಗಳನ್ನು ಸಾಲಗಾರರು ಕೈಗೊಳ್ಳದೇ ಇದ್ದುದರಿಂದ, ಮಲ್ಯ ಪುನಃ ಲಂಡನ್‌ಗೆ ತೆರಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next