Advertisement

Vietnam: ಬೃಹತ್‌ ವಂಚನೆ ಪ್ರಕರಣ-ಆಗರ್ಭ ಶ್ರೀಮಂತ ಉದ್ಯಮಿಗೆ ಮರಣದಂಡನೆ ಶಿಕ್ಷೆ

04:22 PM Apr 11, 2024 | Team Udayavani |

ಹನೋಯ್:‌ ದೇಶದ ಅತೀ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂನ ರಿಯಲ್‌ ಎಸ್ಟೇಟ್‌ ಉದ್ಯಮಿ ಟ್ರೂಂಗ್‌ ಮೈ ಲ್ಯಾನ್‌ ಗೆ ಹೊ ಚಿ ಮಿನ್ಹ ನಗರದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

Advertisement

ಇದನ್ನೂ ಓದಿ:IPL 2024; ನಾನು ಗಂಭೀರ್- ನವೀನ್ ರನ್ನು ತಬ್ಬಿಕೊಂಡಿದ್ದು ಹಲವರಿಗೆ ಬೇಸರ ತಂದಿದೆ: ವಿರಾಟ್

2022ರಲ್ಲಿ ಬಂಧನಕ್ಕೊಳಗಾಗಿದ್ದ ಲ್ಯಾನ್‌ (67ವರ್ಷ) ಅವರು ರಿಯಲ್‌ ಎಸ್ಟೇಟ್‌ ಕಂಪನಿ ವ್ಯಾನ್‌ ಥಿನ್‌ ಫಾಟ್‌ ಮುಖ್ಯಸ್ಥರಾಗಿದ್ದರು. ಈಕೆ 12 ಶತಕೋಟಿ ಮೌಲ್ಯದ ವಂಚನೆ ಆರೋಪ ಎದುರಿಸುತ್ತಿದ್ದು, ಇದು ವಿಯೆಟ್ನಾಂನ 2022ನೇ ಸಾಲಿನ ಜಿಡಿಪಿಯ ಸುಮಾರು 3 ಪ್ರತಿಶತವಾಗಿದೆ ಎಂದು ಅಸೋಸಿಯೇಟೆಡ್‌ ಪ್ರೆಸ್‌ ವರದಿ ಮಾಡಿದೆ.

2012 ಮತ್ತು 2022ರ ನಡುವೆ ಸಾವಿರಾರು ನಕಲಿ ಕಂಪನಿಗಳ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಸೈಗಾನ್‌ ಜಾಯಿಂಟ್‌ ಸ್ಟಾಕ್‌ ಕಮರ್ಷಿಯಲ್‌ ಬ್ಯಾಂಕ್‌ ಅನ್ನು ಲ್ಯಾನ್ ಕಾನೂನು ಬಾಹಿರವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದರು.

2022ರಲ್ಲಿ ಭ್ರಷ್ಟಾಚಾರ ನಿಗ್ರಹ ತೀವ್ರಗೊಂಡ ಹಿನ್ನೆಲೆಯಲ್ಲಿ ಲ್ಯಾನ್‌ ಬಂಧನ ಹೈ ಪ್ರೊಫೈಲ್‌ ನಲ್ಲಿ ಒಂದಾಗಿದೆ. ವ್ಯಾನ್‌ ಥಿನ್ಹ್‌ ವಿಯೆಟ್ನಾಂನ ಶ್ರೀಮಂತ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಐಶಾರಾಮಿ ವಸತಿ ಕಟ್ಟಡ, ಕಚೇರಿ, ಶಾಪಿಂಗ್‌ ಮಾಲ್‌ ಮತ್ತು ಹೋಟೆಲ್‌ ಗಳನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next