ಬನಹಟ್ಟಿ: ಕುರುಬ ಸಮಾಜದ ಆರಾಧ್ಯದೇವ ಇಲ್ಲಿನ ಮಾಳಿಂಗರಾಯ ದೇವರ ಜಾತ್ರೆ ಅದ್ದೂರಿಯಿಂದ ಜರುಗಿತು. ಬೆಳಗ್ಗೆ ಮಾಳಿಂಗರಾಯ ಮೂರ್ತಿಗೆ ವಿಶೇಷ ಪೂಜೆ ಹಾಗೂ ಬಂಡಾರದ ಮೂಲಕ ಅಭಿಷೇಕ ಮಾಡಲಾಯಿತು. ನಂತರ ಬೆಳಗ್ಗೆ 11ರಿಂದ ಬನಹಟ್ಟಿ ನಗರದ ಈಶ್ವರಲಿಂಗ ಮೈದಾನದಿಂದ ತೆರದ ವಾಹನದಲ್ಲಿ 7 ಅಡಿ ಎತ್ತರವಿರುವ ಕಳಸದ ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಕುಂಭಮೇಳದಲ್ಲಿ ಭಾಗಿಯಾಗಿದ್ದರು. ನಗರದ ಎಂ.ಎಂ. ಬಂಗ್ಲೆ ಮೂಲಕ ಹಾಯ್ದು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಳಿಂಗರಾಯ ದೇವಸ್ಥಾನದಲ್ಲಿ ಕೊನೆಗೊಳಿಸಲಾಯಿತು.
ಮಾರ್ಗದ ಉದ್ದಕ್ಕೂ ಬ್ಯಾಂಜ್ ಸೇರಿದಂತೆ ಅನೇಕ ವಾದ್ಯಮೇಳಗಳೊಂದಿಗೆ ಡೊಳ್ಳಿನ ಪೆಟ್ಟುಗಳ ಕಾರ್ಯಕ್ರಮ ಕೂಡಾ ಜರುಗಿದವು. ಯಲ್ಲಪ್ಪ ಮಹೇಶವಾಡಗಿ ಮಹಾರಾಜರು ದೇವಸ್ಥಾನಕ್ಕೆ ಬೆಲೆ ಬಾಳುವ ಕಳಸ ನಿರ್ಮಾಣ ಮಾಡಿ ನೀಡಿದ್ದರಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರಾಮಪ್ಪ ಜಿಡ್ಡಿಮನಿ, ಸಿದ್ದಪ್ಪ ಕರಿಗಾರ, ಮಾಳಪ್ಪ ಕರಿಗಾರ, ಹಣಮಂತ ಎಕ್ಕಿಎಲಿ, ಬೀರಪ್ಪ ಬುಜಂಗ, ಸಿದ್ದಪ್ಪ ತುಕ್ಕಪ್ಪಗೋಳ, ಜೋತೆಪ್ಪ ಕಟ್ಟಿಮನಿ, ಹಣಮಂತ ಕುಡಚಿ, ಕಾಡಪ್ಪ ತುಂಗಳ, ಮುತ್ತಪ್ಪ ಬುಜಂಗ, ಮಾರುತಿ ಮಹೇಷವಾಡಗಿ, ಯಲ್ಲಪ್ಪ
ಸಂಗೊಳ್ಳಿ, ಸಿದ್ದಮಲ್ಲಪ್ಪ ಜಿಡ್ಡಿಮನಿ, ಯಲ್ಲಪ್ಪ ಸಂಗೊಳ್ಳಿ ಇದ್ದರು.