Advertisement

ಸಂತ್ರಸ್ತರಿಗಾಗಿ ಸ್ವಾಭಿಮಾನದ ಹೋರಾಟ: ಮಲ್ಲಿಕಾರ್ಜುನ ಚರಂತಿಮಠ

09:15 AM May 03, 2023 | Team Udayavani |

ಬಾಗಲಕೋಟೆ: ನಡುಗಡ್ಡೆ ಪ್ರದೇಶದ ಎಲ್ಲ ಮನೆಗಳಿಗೆ ಯೋಗ್ಯ ಪರಿಹಾರ ಹಾಗೂ ಸ್ಥಳಾಂತರ ಮಾಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕಿಸಿಲು ನಿರಂತರ ಸ್ವಾಭಿಮಾನದ ಹೋರಾಟ ಮಾಡುತ್ತೇವೆ. ಈ ಬಾರಿ ಸಂತ್ರಸ್ತರು ತಮ್ಮ ಮತವನ್ನು ಆಟೋರಿಕ್ಷಾ ಚಿಹ್ನೆಗೆ ನೀಡುವ ಮೂಲಕ ತಮ್ಮ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮನವಿ ಮಾಡಿದರು.

Advertisement

ನಗರದ ಕಿಲ್ಲಾ ಓಣಿ ಸೇರಿದಂತೆ ವಿವಿಧ ನಗರಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚಿಸಿದರು. ನಡುಗಡ್ಡೆ ಸಂತ್ರಸ್ತರು ಹಲವು ವರ್ಷಗಳಿಂದ ನಮ್ಮನ್ನು ಸ್ಥಳಾಂತರಿಸಿ ಎಂದು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಸಂತ್ರಸ್ತರ ಕೂಗು ಮಾತ್ರ ಅವರಿಗೆ ಕೇಳುತ್ತಿಲ್ಲ. ಈ ಬೇಡಿಕೆ ಕಳೆದ 2004ರಿಂದಲೂ ಕೇಳಿ ಬರುತ್ತಿದೆ. ಇಲ್ಲಿನ ಜನರಿಗಾಗಿ ನಾನೂ ಹೋರಾಟ ಮಾಡಿ ಜೈಲಿಗೆ ಹೋಗಿದ್ದೆ. ನಡುಗಡ್ಡೆ ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವೇ ಆಗಿದೆ, ಹೊರತು ಅವರಿಗೆ ಸ್ಪಂದಿಸುವ ಕೆಲಸ ಯಾರೂ ಮಾಡಿಲ್ಲ ಎಂದರು.

ಕ್ಷೇತ್ರ ಎಲ್ಲೆಡೆ ಇಂತಹ ಹಲವಾರು ಸಮಸ್ಯೆಗಳು ಸಾಕಷ್ಟಿವೆ. ಜನರು ಸಮಸ್ಯೆಗಳಿಂದ ಹೊರಬಂದು ಬದುಕು ಸಾಗಿಸುವುದಕ್ಕೆ ಸಾಧ್ಯವಾಗಿಲ್ಲ. ಆದರೆ, ಸ್ವಾಭಿಮಾನಿ ಕಾರ್ಯಕರ್ತರು ಇದೆಲ್ಲವನ್ನು ಗಮನಿಸಿ ಈ ಬಾರಿ ಕ್ಷೇತ್ರಕ್ಕೆ ಬದಲಾವಣೆ ತರುವುದಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕರು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಹೊಸ ರಾಜಕೀಯಕ್ಕೆ ನಾಂದಿಹಾಡಲಿದ್ದಾರೆ ಎಂದು ಹೇಳಿದರು.

ಕ್ಷೇತ್ರಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು, ಕೈಗಾರಿಕೆ ಸ್ಥಾಪನೆ, ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ಹಲವು ಯೋಜನೆ ಜಾರಿಗೆ ತರುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇವೆ. ಕ್ಷೇತ್ರದ ಎಲ್ಲೆಡೆ ಸ್ವಾಭಿಮಾನಿ ಕಾರ್ಯಕರ್ತರ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ವಿರೋಧಿಗಳು ಹತಾಶರಾಗಿದ್ದಾರೆ ಎಂದರು.

ಮುಖಂಡರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಗುರು ಅನಗವಾಡಿ, ಶಂಕರ ಮಗಜಿ, ವಿಶಾಲ ಮಾಂಡಗಿ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವಿರೇಶ ಹಿರೇಮಠ, ಚರಣ ಜಾಧವ, ವಿಠ್ಠಲ ಕಾಳಬರ, ಈರಣ್ಣ ವಿಜಯಪುರ, ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಲಕ್ಷ್ಮೀ ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಮುಂತಾದವರು ಪಾಲ್ಗೊಂಡಿದ್ದರು.

Advertisement

ಬಾಗಲಕೋಟೆಯಲ್ಲಿ ಈ ಬಾರಿ ಬದಲಾವಣೆ ಗ್ಯಾರಂಟಿಯಾಗಿದೆ. ಮತದಾರರ ಬೆಂಬಲ ಸ್ವಾಭಿಮಾನಿ ಕಾರ್ಯಕರ್ತರಿಗಿದೆ. ಜನರು ನಮಗೆ ನೀಡುತ್ತಿರುವ ಬೆಂಬಲ ಕಂಡು ಕೆಲವರು ಹತಾಶರಾಗಿದ್ದಾರೆ. ಸೋಲಿನ ಭೀತಿಯಿಂದ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಜನರು ಮೇ 10ರಂದು ಉತ್ತರ ಕೊಡುತ್ತಾರೆ. –ಮಲ್ಲಿಕಾರ್ಜುನ ಚರಂತಿಮಠ, ಪಕ್ಷೇತರ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next