ಹೊಸದಿಲ್ಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯ ವಿಧಾನಸಭೆ ಚುನಾವಣೆ ಸೋಲಿಗೆ ಕೇವಲ ಗಾಂಧಿ ಕುಟಂಬ ಜವಾಬ್ದಾರರಲ್ಲ, ಪ್ರತಿ ರಾಜ್ಯದ ಕಾಂಗ್ರೆಸ್ ನಾಯಕರು, ಸಂಸದರೂ ಹೊಣೆಗಾರರು ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಾವೆಲ್ಲರೂ ಸೋನಿಯಾ ಗಾಂಧಿಗೆ 5 ರಾಜ್ಯಗಳಲ್ಲಿನ ಸೋಲಿಗೆ ಅವರು ಮಾತ್ರ ಹೊಣೆಯಲ್ಲ, ಪ್ರತಿಯೊಬ್ಬ ರಾಜ್ಯ ನಾಯಕರು ಮತ್ತು ಸಂಸದರು ಜವಾಬ್ದಾರರು, ಗಾಂಧಿ ಕುಟುಂಬವಲ್ಲ ಎಂದು ಹೇಳಿದ್ದೇವೆ. ನಾವು ಸೋನಿಯಾ ಗಾಂಧಿ ನಂಬಿಕೆ ಇಟ್ಟಿದ್ದೇವೆ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಹೇಳಿದರು.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಅಧಿಕಾರ ಹೊಂದಿದ್ದ ಪಂಜಾಬ್ ನಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ.
ಇದನ್ನೂ ಓದಿ:ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಣ್ಣದಲ್ಲ: ವಿಜಯೇಂದ್ರ ಕುರಿತು ಸಿ.ಟಿ.ರವಿ
ಸೋಲಿನ ಬೆನ್ನಲ್ಲೇ ರವಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಿದೆ. “ನಾವು ಬಿಜೆಪಿ ಮತ್ತು ಅದರ ಸಿದ್ದಾಂತದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ” ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಖರ್ಗೆ ಹೇಳಿದರು.