Advertisement
ಸಚಿನ್ ಪೈಲಟ್ ಅವರನ್ನು ಸಿಎಂ ಸ್ಥಾನಕ್ಕೆ ನೇಮಿಸಬಾರದು ಎಂದು ಗೆಹ್ಲೋಟ್ ಬಣದ 92 ಶಾಸಕರು ಪಟ್ಟು ಹಿಡಿದಿದ್ದರು. ರವಿವಾರ ರಾತ್ರಿ ಆರಂಭವಾದ ಈ ಡ್ರಾಮಾ ಸೋಮವಾರವೂ ಮುಂದುವರಿದಿದ್ದು, ಇದು ಕೈ ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿದೆ.
Related Articles
Advertisement
ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ಸೋನಿಯಾ ನಿವಾಸದಲ್ಲಿ ಪ್ರಿಯಾಂಕಾ ವಾದ್ರಾ, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಕಮಲ್‌ನಾಥ್, ಅಜಯ ಮಕೇನ್ ಸಭೆ ನಡೆಸಿದರು. ಅಲ್ಲದೆ, ಈಗ ವೇಣುಗೋಪಾಲ್, ದಿಗ್ವಿಜಯ್ ಸಿಂಗ್, ಮುಕುಲ್ ವಾಸ್ನಿಕ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ರೇಸ್‌ಗೆ ಬಂದಿದ್ದಾರೆ. ಇವರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಹೈಕಮಾಂಡ್ ಉತ್ಸುಕವಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಗೆ ನಿಷ್ಠರಾಗಿರುವ, ರಾಜ್ಯಸಭೆಯ ವಿಪಕ್ಷ ನಾಯಕಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಇದೀಗ ಅಧ್ಯಕ್ಷ ಸ್ಥಾನದ ರೇಸ್ ನ ಮುಂಚೂಣಿಯಲ್ಲಿದ್ದಾರೆ. ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕು ಎಂದು ಹೇಳುತ್ತಿದ್ದ ಖರ್ಗೆ ಇದೀಗ ಪ್ರೆಸಿಡೆಂಟ್ ರೇಸ್ ಗೆ ಬರುವಷ್ಟು ರಾಜಕೀಯ ಬೆಳವಣಿಗೆಗಳು ನಡೆದಿದೆ.
ಗೆಹ್ಲೋಟ್ ನಿಷ್ಠಾವಂತ ಶಾಂತಿ ಕುಮಾರ್ ಧರಿವಾಲ್ ಅವರು ರಾಜಸ್ಥಾನದ ಎಐಸಿಸಿ ಉಸ್ತುವಾರಿ ಅಜಯ್ ಮಾಕನ್ ಅವರು ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಪೈಲಟ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.