Advertisement

ಕಳಚಿದ ಲವ-ಕುಶ ಕೊಂಡಿ 

07:35 AM Jul 28, 2017 | Team Udayavani |

ಕಲಬುರಗಿ: ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರನ್ನು ಲವ-ಕುಶ ಎಂದೇ ಬಣ್ಣಿಸಲಾಗುತ್ತಿತ್ತು.

Advertisement

ಸುಮಾರು 40 ವರ್ಷಗಳಿಂದಲೂ ಪ್ರತಿ ಸಲದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದ ಈ ಜೋಡಿ ರಾಜ್ಯವಷ್ಟೇ ಅಲ್ಲ,
ದೇಶದಲ್ಲೂ “ಹಿರಿಯ ಜೋಡಿ’ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

“ಲವ-ಕುಶ’ ಎಂದು ಈ ಜೋಡಿ ಖ್ಯಾತಿ ಪಡೆದಿರುವುದಕ್ಕೆ ಹಲವು ಕಾರಣಗಳಿವೆ. ಇಬ್ಬರೂ ಏಕಕಾಲಕ್ಕೆ ವಿಧಾನಸಭೆಗೆ ಪ್ರವೇಶ ಮಾಡಿರುವುದು, ಜತೆಯಾಗಿಯೇ ದೇವರಾಜ ಅರಸು ಸಂಪುಟದಲ್ಲಿ ಪ್ರಥಮ ಬಾರಿಗೆ ಸಚಿವರಾಗಿ ನಂತರ ಸಮಬಲವಾಗಿಯೇ ರಾಜ್ಯ ಸಂಪುಟದ ಖಾತೆಗಳನ್ನು ನಿಭಾಯಿಸಿರುವುದು, ಇಬ್ಬರೂ ಕೆಪಿಸಿಸಿ ಅಧ್ಯಕ್ಷರಾಗಿರುವುದು
ಹಾಗೂ ವಿರೋಧ ಪಕ್ಷದ ನಾಯಕರಾಗಿರುವುದು ಇತ್ಯಾದಿ.  ಇನ್ನು ಧರ್ಮಸಿಂಗ್‌ ಸಿಎಂ ಆಗಿದ್ದರೆ ಖರ್ಗೆ ಅವರಿಗೆ ಮಾತ್ರ ಆ ಭಾಗ್ಯ ದೊರಕಿಲ್ಲ. ಅದೇ ರೀತಿ ಧರ್ಮಸಿಂಗ್‌ ಕೇಂದ್ರದ ಮಂತ್ರಿಯಾಗಿಲ್ಲ. ಈ ಎರಡೇ ಅವಕಾಶದಲ್ಲಿ ಮಾತ್ರ ವ್ಯತ್ಯಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next