ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಅನಂತರ ಮೊದಲ ಬಾರಿಗೆ ತವರು ರಾಜ್ಯಕ್ಕೆ ಬರುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದ್ದೂರಿ ಸ್ವಾಗತ ಕೋರಲು ಕಾಂಗ್ರೆಸ್ ಸಜ್ಜಾಗಿದೆ.
ರವಿವಾರ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಹಮ್ಮಿ ಕೊಳ್ಳುವ ಮೂಲಕ ಖರ್ಗೆ ಅವರಿಗೆ ಬೃಹತ್ ಅಭಿನಂದನ ಸಮಾರಂಭ ಆಯೋಜಿಸಲಾಗಿದೆ. ಸುತ್ತಮುತ್ತಲ ಜಿಲ್ಲೆಗಳ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ದಿಲ್ಲಿಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಲ್ಲಿಂದಲೇ ಅದ್ದೂರಿ ಸ್ವಾಗತ ಕೋರಿ ಮೆರವಣಿಗೆ ನಡೆಸಿ ನೇರವಾಗಿ ಕೆಪಿಸಿಸಿ ಕಚೇರಿಗೆ ಕರೆತರಲಾಗುವುದು. ಅನಂತರ ಮಧ್ಯಾಹ್ನ 2 ಗಂಟೆಗೆ ಅರ ಮನೆ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗುವರು.
ಖರ್ಗೆ ಸ್ವಾಗತಕ್ಕಾಗಿ ಸಮಿತಿ ರಚಿಸಿದ್ದು, ಸಮಾವೇಶಕ್ಕೆ ಬರಲಿರುವ ಲಕ್ಷಾಂತರ ಕಾರ್ಯಕರ್ತರಿಗೆ ವಾಹನ ನಿಲುಗಡೆ ಸೇರಿ ಇತರ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಜೆಯೇ ದಿಲ್ಲಿಯನ್ನು ತಲುಪಿ,ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಪ್ರವಾಸಕ್ಕೆ ತೆರಳುವರು ಎಂದು ಹೇಳ ಲಾಗಿದೆ. ಎಐಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್,
ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್,ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್,ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿ ಹೊಳಿ, ಧ್ರುವ ನಾರಾಯಣ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್. ಮುನಿಯಪ್ಪ, ವೀರಪ್ಪ
ಮೊಲಿ, ರೆಹಮಾನ್ ಖಾನ್, ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಸಹಿತ ರಾಜ್ಯದ ಹಿರಿಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರು ವುದು ಹೆಮ್ಮೆಯ ಸಂಗತಿ. ರಾಜ್ಯದ ಕಾಂಗ್ರೆಸ್‌ನ ಪ್ರತೀ ಕಾರ್ಯಕರ್ತ ನಿಗೂ ಸಂತಸ ತಂದಿದೆ. ಅವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿ ಸಲಾಗುವುದು. ಸಮಾವೇಶ
ನಮಗೆ ಸಹ ಶಕ್ತಿ ತುಂಬಲಿದೆ.
-ಡಿ.ಕೆ.ಶಿವಕುಮಾರ್,
ಕೆಪಿಸಿಸಿ ಅಧ್ಯಕ್ಷ
ನರೇಂದ್ರ ಮೋದಿ ಸರಕಾರವು ಯುವ ಜನರಿಗಾಗಿ ಹೊಸ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಭಾರೀ ಸದ್ದು ಮಾಡಿದ್ದ ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಘೋಷಣೆಗಳು ಏನಾದವು? ನೀವು ಭರವಸೆ ಕೊಟ್ಟ 16 ಕೋಟಿ ಉದ್ಯೋಗಗಳ ಕಥೆ ಏನಾಯಿತು?
-ಮಲ್ಲಿಕಾರ್ಜುನ ಖರ್ಗೆ,
ಎಐಸಿಸಿ ಅಧ್ಯಕ್ಷ