ಹೋಗಬೇಕು. ಇಲ್ಲದಿದ್ದರೆ ಕೆಲಸವಿಲ್ಲದೇ ಇಲ್ಲಿಯೇ ಇರಬೇಕು. ಇಂತಹ ಪರಿಸ್ಥಿತಿ ತೊಲಗಿಸಿ, ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
Advertisement
ನಗರದ ಹಳೆಯ ಐಬಿ ಹತ್ತಿರದ ಕೊಪ್ಪ ವಕೀಲರ ಮನೆಯಿಂದ ಪ್ರಚಾರ ಆರಂಭಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಯ ಪಣ ತೊಟ್ಟಿರುವ ಸ್ವಾಭಿಮಾನಿ ಕಾರ್ಯಕರ್ತರ ಆಟೋ ಚಿನ್ಹೆಗೆ ಮತದಾರರು ತಮ್ಮ ಮತ ನೀಡುವ ಮೂಲಕ ಹೊಸ ಬದಲಾವಣೆಗೆ ಅವಕಾಶ ನೀಡಬೇಕು. ಸಾಮಾನ್ಯ ಜನರ ಬದುಕು ಸದೃಢಗೊಂಡಾಗ ಮಾತ್ರ, ಆ ಕ್ಷೇತ್ರ ಸಮಗ್ರ ಅಭಿವೃದ್ಧಿ ಹೊಂದಿದೆ ಎನ್ನಬಹುದು. ಆದರೆ, ಸಂತ್ರಸ್ತರ ಕ್ಷೇತ್ರದಲ್ಲಿ ಸಾವಿರಾರು ಸಮಸ್ಯೆಗಳೊಂದಿಗೆ ಇಲ್ಲಿನ ಜನರು ಬದುಕುವಂತಾಗಿದೆ ಎಂದರು.
Related Articles
ಬಹುತೇಕರು ಐದು ವರ್ಷ ನೆಮ್ಮದಿಯಿಂದ ಬದುಕಲು ಸಾಧ್ಯವಾಗಲ್ಲ ಎಂದು ಹೇಳಿದರು.
Advertisement
ಹವೇಲಿಯಲ್ಲಿ ಬಿರುಸಿನ ಪ್ರಚಾರ: ಸ್ವಾಭಿಮಾನಿ ಬಳಗದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರು ನಗರದ ಹವೇಲಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹವೇಲಿಯ ಜನರು ನಿತ್ಯವೂ ದುಡಿದು ಬದುಕುವಸ್ವಾಭಿಮಾನ ಜನ. ಈ ಜನರೊಂದಿಗೆ ನಾನು ಸದಾ ಇರುವೆ. ಕೊರೊನಾ ಸಂದರ್ಭದಲ್ಲಿ ಇಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುವ, ಗೌರವಯುತವಾಗಿ ನಡೆದುಕೊಳ್ಳುವ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಹಿರಿಯ ವಕೀಲರಾದ ಎ.ಜಿ. ಕೊಪ್ಪ, ಮುಖಂಡರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಸಜ್ಜನ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವಿರೇಶ ಹಿರೇಮಠ, ಚರಣ ಜಾಧವ, ವಿಠಲ ಕಾಳಬರ,
ಈರಣ್ಣ ವಿಜಯಪುರ, ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ
ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಹಾಜರಿದ್ದರು.