Advertisement

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

08:48 PM Oct 05, 2024 | Team Udayavani |

ಮುಂಬೈ: ಮಲಯಾಳಂ ಚಿತ್ರರಂಗದಲ್ಲಿ ಮೀ ಟೂ ಬಿರುಗಾಳಿ ಶುರುವಾದ ಬಳಿಕ ವಿವಿಧ ಚಿತ್ರರಂಗಗಳ ನಟಿಯರು ತಮ್ಮ ವಿರುದ್ಧ ನಡೆದ ಲೈಂಗಿಕ ಕಿರುಕುಳಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಸಾಲಿಗೆ ಈಗ ಬಾಲಿವುಡ್‌ ನಟಿ ಮಲ್ಲಿಕಾ ಶೆರಾವತ್‌ ಕೂಡ ಸೇರಿದ್ದು, ದೊಡ್ಡ ಸಿನಿಮಾ ಒಂದರ ಚಿತ್ರೀಕರಣದ ವೇಳೆ ತಮಗೆ ಕಹಿ ಅನುಭವ ಆಗಿತ್ತು ಎಂದಿದ್ದಾರೆ.

Advertisement

ಜಾಲತಾಣದಲ್ಲಿ ವಿಡಿಯೋ ಮೂಲಕ ಈ ವಿಚಾರ ಹಂಚಿಕೊಂಡಿರುವ ಅವರು “”ದೊಡ್ಡ ತಾರಾಗಣ ಹೊಂದಿದ್ದ ಕಾಮಿ ಡಿ ಸಿನಿಮಾವೊಂದರ ಚಿತ್ರೀಕರಣ ದುಬೈನಲ್ಲಿ ನಡೆ ಯುತ್ತಿತ್ತು. ಶೂಟಿಂಗ್‌ ಮುಗಿದು ಹೋಟೆಲ್‌ನಲ್ಲಿ ಉಳಿದಿದ್ದ ವೇಳೆ ಸಿನಿಮಾ ಹೀರೋ ನನ್ನ ರೂಮಿನ ಬಾಗಿಲನ್ನು ಒಡೆದುಹೋಗುವಂತೆ ಬಡಿಯುತ್ತಿದ್ದ. ಒಳ ಬರಲು ಪ್ರಯತ್ನಿಸಿದ್ದ. ನಾನು ಅದನ್ನು ಸಾಧ್ಯವಾಗಲು ಬಿಡಲಿಲ್ಲ. ಬಳಿಕ ಆ ನಟ ಮತ್ತೆ ಎಂದೂ ನನ್ನೊಂದಿಗೆ ನಟಿಸಲಿಲ್ಲ” ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next