ಕಾಪು: ಮಲ್ಲಾರು ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಯ್ಯದ್ ಖ್ವಾಜಾ ಫೀರಾನ್ ಎಜುಕೇಶನ್ ಟ್ರಸ್ಟ್ ಮತ್ತು ವಜಾಹತ್ ಇಸ್ಮಾಯಿಲ್ ಇವರ ಸಹಭಾಗಿತ್ವದಲ್ಲಿ ವಿವಿಧ ಶೈಕ್ಷಣಿಕ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಯ್ಯದ್ ಖ್ವಾಜಾ ಫಿರಾನ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಶಭಿ ಅಹಮ್ಮದ್ ಖಾಝಿ ಮಾತನಾಡಿ, ತಮ್ಮ ಟ್ರಸ್ಟ್‌ನ ಮೂಲಕವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಕೊಡುಗೆ ನೀಡಲಾಗುತ್ತಿದೆ ಎಂದರು.
ಕಮಿಟಿ ಸದಸ್ಯ ಅನ್ವರ್ ಆಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು, ಹೆತ್ತವರು, ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳ ಬಗ್ಗೆ ತಾತ್ಸಾರ ಭಾವನೆ ಮೂಡಿ ಬರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಡುಗೆ ನೀಡಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಕಲಿತವರೇ ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು, ಈ ಸಂಸ್ಥೆಗೆ ಕೂಡ ಯಾವುದೇ ರೀತಿಯ ಸವಲತ್ತು ದೊರಕಿಸಿಕೊಡಲು ಟ್ರಸ್ಟ್ ಬದ್ಧವಾಗಿದೆ ಎಂದರು.
ಸುಮಾರು 60 ಸಾವಿರ ರೂ. ಮೌಲ್ಯದ ಉಚಿತ ನೋಟ್ಸ್ ಪುಸ್ತಕ, ಕೊಡೆ ಮತ್ತು ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ಖ್ವಾಜಾ ಫೀರ್ ಕಮಿಟಿಯ ಸದಸ್ಯರಾದ ಇಕ್ಬಾಲ್, ಬಶೀರ್ ಸಾಹೇಬ್, ಶಫಿ ಮಾಸ್ಟರ್, ಇಸ್ಮಾಯಿಲ್, ಸಹಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.
ಮಲ್ಲಾರು ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯ ಮುಖೋÂಪಾಧ್ಯಾಯಿನಿ ತಾರಾ ಜಿ. ಪಟಗಾರ್ ಸ್ವಾಗತಿಸಿ, ಜೋಯ್ಸ ಎಂ. ಅಲೊ#àನ್ಸಾ ವಂದಿಸಿದರು. ಶ್ರೀನಿವಾಸ ಎಂ. ಕಾರ್ಯಕ್ರಮ ನಿರೂಪಿಸಿದರು.