ಬಸವಕಲ್ಯಾಣ: ತಾಲೂಕಿನ ಹುಲಗುತ್ತಿ ಗ್ರಾಮದ ರೈತ ಮಲ್ಲಪ್ಪ ಕಾಶಪ್ಪ ಮೈಲಾರಿ ಮಹಾತ್ಮ ಗಾಂಧಿರಾಷ್ಟ್ರೀಯ ಉದ್ಯೋಗ ಗ್ರಾಮೀಣ ಖಾತ್ರಿ ಯೋಜನೆಯಡಿ ಗುಲಾಬಿ ಹೂ ಬೆಳೆ ಬೆಳೆದಿದ್ದು, ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ನಾರಾಯಣಪುರ ಗ್ರಾಪಂ ಒಳಪಡುವ ಹುಲಹುತ್ತಿ ರೈತರಿಗೆ ಸರ್ಕಾರ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದಹೂ ಬೆಳೆ ಬೆಳೆಯುವುದಕ್ಕೆ 1 ಲಕ್ಷ ರೂ.ಅನುದಾನ ನೀಡುತ್ತಿದೆ. ಇದನ್ನೆ ಬಳಸಿಕೊಂಡುರೈತ ಮಲ್ಲಪ್ಪ ಒಂದು ಎಕರೆ ಭೂಮಿಯಲ್ಲಿಬೆಂಗಳೂರಿನ ಪನ್ನಿರ್ ಹಾಗೂ ಬುಲೆಟ್ ಗುಲಾಬಿಹೂ ಸಸಿಗಳನ್ನು ನಾಟಿ ಮಾಡಿದ್ದಾರೆ. 15 ರೂ.ಗೆ ಒಂದರಂತೆ 3,800 ಸಸಿಗಳನ್ನು ಖರೀದಿಸಿದ್ದು,3 ಅಡಿ ಅಂತರದಲ್ಲಿ ಹನಿ ನೀರಾವರಿ ಪದ್ಧತಿಅಳವಡಿಸಿಕೊಂಡಿದ್ದಾರೆ. ಮೂರು ತಿಂಗಳಲ್ಲಿ ಆದಾಯ ಪ್ರಾರಂಭವಾಗಿದ್ದು, 100 ರೂ.ಕೆ.ಜಿ.ಯಂತೆ ನಿತ್ತ 10 ಕೆ.ಜಿ. ಮಾರಾಟಮಾಡಲಾಗುತ್ತಿದ್ದು, ತಿಂಗಳಿಗೆ 40ರಿಂದ 50 ಸಾವಿರ ರೂ. ಸಂಪಾದಿಸುತ್ತಿದ್ದಾರೆ.
ಸೋಯಾಬಿನ್ ಮತ್ತು ಕಬ್ಬು ಬೆಳೆಯುವುದಕ್ಕಿಂತಸರ್ಕಾರದ ಮಹತ್ವಕಾಂಕ್ಷಿಯೋಜನೆಯಾದ ಮನರೇಗಾಯೋಜನೆಯಡಿ 1 ಲಕ್ಷ ರೂ.ಅನುದಾನ ಬಳಸಿಕೊಂಡುಉತ್ತಮ ಆದಾಯಮಾಡಿಕೊಂಡಿದ್ದೇನೆ. ಇದೇ ರೀತಿ ಪ್ರತಿಯೊಬ್ಬರು ಈ ಯೋಜನೆಯಡಿಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕಆರ್ಥಿಕ ಸದೃಢತೆ ಸಾಧಿಸಬೇಕೆಂದು ರೈತಮಲ್ಲಪ್ಪ ಉದಯವಾಣಿಗೆ ತಮ್ಮ ಅನುಭವ ಹಂಚಿಕೊಂಡರು.
ಮನರೇಗಾ ಯೋಜನೆಯಲ್ಲಿ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡುಮಿಶ್ರ ಬೆಳೆ ಬೆಳೆದು ಕೃಷಿಯಲ್ಲಿ ಸಾಧನೆಮಾಡಿರುವ ಸಾಕಷ್ಟು ಉದಾಹರಣೆಗಳಿವೆ.ಹೀಗಾಗಿ ರೈತರು ಸರ್ಕಾರ ಬಡವರಿಗಾಗಿಜಾರಿಗೆ ತಂದ ಈ ಯೋಜನೆ ಲಾಭಪಡೆದುಕೊಳ್ಳಬೇಕು.
ಬೀರೇಂದ್ರಸಿಂಗ್ ಠಾಕೂರ್, ಬಸವಕಲ್ಯಾಣ
ಮನರೇಗಾ ಯೋಜನೆಯಲ್ಲಿ ರೈತರ ಸ್ವಾಲಂಬಿ ಜೀವನಕ್ಕೆ ಬೇಕಾಗುವ ಸಾಕಷ್ಟು ದಾರಿಗಳಿವೆ. ಹೀಗಾಗಿ ಸೋಯಾಬಿನ್ ಮತ್ತು ಕಬ್ಬು ಬೆಳೆಯುವುದಕ್ಕಿಂತ ಮನರೇಗಾ ಯೋಜನೆಯ ಸದುಪಯೋಗ ಪಡೆದುಕೊಂಡು ಹೂ, ಪಪ್ಪಾಯಿ ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುತ್ತದೆ.
– ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಪಂ ಸಿಇಒ