Advertisement

ಸ್ಟೀವ್ ಸ್ಮಿತ್ ಗಿಂತ ಶೋಯೆಬ್ ಮಲಿಕ್ ಉತ್ತಮ ಆಟಗಾರ: ಚಾಹಲ್ ಹೇಳಿಕೆ

02:41 PM Apr 30, 2020 | keerthan |

ಹೊಸದಿಲ್ಲಿ: ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಪಾಕಿಸ್ಥಾನದ ಆಟಗಾರ ಶೋಯೆಬ್ ಮಲಿಕ್ ಪರ ಹೇಳಿಕೆಯೊಂದನ್ನು ನೀಡಿದ್ದಾರೆ. ಸ್ಪಿನ್ನರ್ ಚಾಹಲ್ ಪರ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗಿಂತ ಶೋಯೆಬ್ ಮಲಿಕ್ ಸ್ಪಿನ್ ಬೌಲಿಂಗ್ ಗೆ ಉತ್ತಮವಾಗಿ ಆಡುತ್ತಾರಂತೆ !

Advertisement

ಇನ್ಸ್ಟಾಗ್ರಾಂ ಚಾಟ್ ನಲ್ಲಿ ಮಾತನಾಡಿದ ಚಾಹಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಸ್ಪಿನ್ ಗೆ ಉತ್ತಮ ಆಡುತ್ತಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ ಸ್ಪಿನ್ನರ್ ಗಳನ್ನು ಎದುರಿಸುವಾಗ ಬಳಸುವ ಟೆಕ್ನಿಕ್ ಸ್ಮಿತ್ ಗಿಂತ ಉತ್ತಮವಾಗಿರುತ್ತದೆ ಎಂದಿದ್ದಾರೆ.

ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡಾ ಸ್ಪಿನ್ನರ್ ಗಳನ್ನು ಉತ್ತಮವಾಗಿ ಆಡುತ್ತಾರೆ. ಅದರಲ್ಲೂ ನಿಧಾನಗತಿಯ ಪಿಚ್ ನಲ್ಲಿ ಅವರು ನಿಜಕ್ಕೂ ಉತ್ತಮ ಆಟಗಾರ ಎಂದು ಚಾಹಲ್ ಹೇಳಿದ್ದಾರೆ.

ಮಲಿಕ್ ರನ್ನುಚಾಹಲ್ 2018ರ ಏಷ್ಯಾ ಕಪ್ ನಲ್ಲಿ ಎದುರಿಸಿದ್ದರು. ಅಂದು ನನ್ನ ಉತ್ತಮ ಎಸೆತಗಳಿಗೂ ಮಲಿಕ್ ಸಲೀಸಾಗಿ ಸಿಂಗಲ್ಸ್ ತೆಗೆಯುತ್ತಿದ್ದರು. ಆತನ ಬ್ಯಾಟಿಂಗ್ ನಿಂದ ಸಂತಸಗೊಂಡಿದ್ದೆ ಎಂದು ಚಾಹಲ್ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next