Advertisement

ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಅಲ್ಪ ಇಳಿಕೆ

11:36 AM Jul 17, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಇಳಿದಿದ್ದು ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ವೇಳೆ ಮಳೆಯಾಗಿದೆ. ಮಳೆ ಅಬ್ಬರಕ್ಕೆ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು ಶುಕ್ರವಾರ ಯಾವುದೇ ಹಾನಿ ಸಂಭವಿಸಿಲ್ಲ.

Advertisement

ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿತ್ತು. ಶುಕ್ರವಾರ ಬೆಳಗ್ಗೆ ಮಳೆಯಾದರೆ ಮಧ್ಯಾಹ್ನದ ವೇಳೆಗೆ ಬಿಡುವು ನೀಡಿದೆ. ಸಂಜೆ ವೇಳೆಗೆ ಮತ್ತೆ ಮಳೆಯಾಗುತ್ತಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಭಾಗದಲ್ಲಿ ಬೆಳಗ್ಗೆ ಮಳೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಮಲ್ಲಂದೂರು, ವಸ್ತಾರೆ, ಆಣೂರು ಭಾಗದಲ್ಲಿ ಮಳೆಯಾಗಿದೆ.

ಚಿಕ್ಕಮಗಳೂರು ಸುತ್ತಮುತ್ತ ಸೇರಿದಂತೆ ಕಡೂರು, ತರೀಕೆರೆ ಅಜ್ಜಂಪುರ ಭಾಗದಲ್ಲಿ ಮೋಡ ಕವಿದ ವಾತವರಣವಿದ್ದು, ಸಾಧಾರಣ ಮಳೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿ ನೀರು ರಭಸವಾಗಿ ಹರಿಯುತ್ತಿದ್ದು ನದಿಪಾತ್ರಕ್ಕೆ ಜನರು ತೆರಳದಂತೆ ಜಿಲ್ಲಾಡಳಿತ ಆದೇಶ ನೀಡಿದೆ ಹಾಗೂ ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲಾದ್ಯಂತ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಜೂನ್‌ ತಿಂಗಳಿಂದ ಇಲ್ಲಿಯವರೆಗೂ 63 ಮನೆಗಳಿಗೆ ಹಾನಿ; ಜಿಲ್ಲಾದ್ಯಂತ ಜೂನ್‌ ತಿಂಗಳಿಂದ ಇಲ್ಲಿಯವರೆಗೂ ಸುರಿದ ಮಳೆಗೆ 63 ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದ್ದರೆ, ಮೂಡಿಗೆರೆತಾಲೂಕಿನಲ್ಲಿ 27 ಮನೆಗಳಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನಲ್ಲಿ 4 ಮನೆ, ಶೃಂಗೇರಿ 4, ತರೀಕೆರೆ 8, ಕಡೂರು 8, ನರಸಿಂಹರಾಜಪುರ 2, ಅಜ್ಜಂಪುರ ತಾಲೂಕಿನಲ್ಲಿ 8 ಮನೆಗಳಿಗೆ ಹಾನಿಯಾಗಿದೆ.

ಮಳೆ ವಿವರ: ಚಿಕ್ಕಮಗಳೂರು ಕಸಬಾ 9.2, ಜೋಳದಾಳ್‌ 20.2, ಅತ್ತಿಗುಂಡಿ 40.1,ಸಂಗಮೇಶ್ವರಪೇಟೆ 38.2, ಕಳಸಾಪುರ 4.4, ಆಲ್ದೂರು25, ಬ್ಯಾರುವಳ್ಳಿ 28.3, ಕೆ.ಆರ್‌.ಪೇಟೆ 19.1, ದಾಸರಹಳ್ಳಿ3.1, ಮಳಲೂರು 21.1, ವಸ್ತಾರೆ 30.6, ಕಡೂರು 1.8, ಸಿಂಗಟಗೆರೆ 4, ಪಂಚನಹಳ್ಳಿ 4, ಎಮ್ಮೆದೊಡ್ಡಿ 2.,ಯಗಟಿ 2, ಗಿರಿಯಾಪುರ 4,ಬಾಸೂರು 1, ಕೊಪ್ಪ 30, ಹರಿಹರಪುರ 28, ಜಯಪುರ 70.2 ಬಸರಿಕಟ್ಟೆ 67.9, ಕಮ್ಮರಡಿ 48.4, ಮೂಡಿಗೆರೆ 34.4, ಕೊಟ್ಟಿಗೆಹಾರ 75, ಗೋಣಿಬೀಡು 58.1, ಜಾವಳಿ 78.2, ಕಳಸ 55,8, ಹಿರೇಬೈಲು 65, ಹೊಸಕೆರೆ 107.6 ಬಿಳ್ಳೂರು 59, ಶೃಂಗೇರಿ 56, ಕಿಗ್ಗ 91, ಕೆರೆಕಟ್ಟೆ 121 ತರೀಕೆರೆ 78 ಲಕ್ಕವಳ್ಳಿ 8.2, ರಂಗೇನಹಳ್ಳಿ 4, ಲಿಂಗದಹಳ್ಳಿ 3, ಉಡೇವಾ 4, ತ್ಯಾಗದಬಾಗಿ 12.6, ತಣಿಗೆಬೈಲು 5.4,ಹುಣಸಘಟ್ಟ 4, ಅಜ್ಜಂಪುರ ಕಸಬಾ 2.2, ಶಿವನಿ 5.2, ಬುಕ್ಕಾಂಬುದಿಯಲ್ಲಿ 2.1 ಮತ್ತು ಚೌಳಹಿರಿಯೂರಿನಲ್ಲಿ 2.1 ಮಿಮೀ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next