Advertisement

ಹಿರಿಯರ ಗಂಟಲು ದ್ರವ ಸಂಗ್ರಹ ಕಾರ್ಯಕ್ಕೆ ಚಾಲನೆ

07:22 PM Jun 24, 2020 | Naveen |

ಮಲೇಬೆನ್ನೂರು: ಪಟ್ಟಣದ ಜಿ.ಬಿ.ಎಂ ಶಾಲೆಯ ಆವರಣದಲ್ಲಿ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಗಂಟಲು ದ್ರವ ಮಾದರಿ ಪಡೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ| ಲಕ್ಷ್ಮೀದೇವಿ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಲೇಬೆನ್ನೂರು ಪುರಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಟ್ಟಣದಲ್ಲಿ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. 97 ವರ್ಷದ ವಯೋ ವೃದ್ಧೆ ಸೇರಿದಂತೆ 15 ಹಿರಿಯ ನಾಗರಿಕರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಪಟ್ಟಣದ ಆಯ್ದ ಪ್ರದೇಶಗಳಲ್ಲಿ 50 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಗಂಟಲು ದ್ರವ ಮಾದರಿ ಪಡೆಯಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್‌, ಪರಿಸರ ಅಭಿಯಂತರ ಉಮೇಶ್‌, ಲ್ಯಾಬ್‌ ಟೆಕ್ನೀಶಿಯನ್‌ ರುದ್ರೇಶ್‌ ಮತ್ತು ಆರೋಗ್ಯ ಕೇಂದ್ರ, ಪುರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next