Advertisement

ಕೊನೆ ಭಾಗದ ಜಮೀನಿಗೆ ನೀರು ಹರಿಸಿ

01:22 PM Apr 09, 2020 | Naveen |

ಮಲೇಬೆನ್ನೂರು: ಭದ್ರಾ ಜಲಾಶಯದ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪದೇ ಭತ್ತದ ಬೆಳೆ ಒಣಗಲಾರಂಭಿಸಿದೆ ಎಂದು ರೈತರು ಆರೋಪಿಸಿದ್ದಾರೆ. ನಾಲೆಯಲ್ಲಿ ಸಮರ್ಪಕ ನೀರು ಹರಿಯುತ್ತಿಲ್ಲ. ಆದ್ದರಿಂದ ಮಳೆ ಬಂದರೆ ಮಾತ್ರ ಬೆಳೆ ಕೈಗೆ ಸಿಗುತ್ತದೆ. ಇಲ್ಲವಾದರೆ ಕೊನೆಭಾಗದ ರೈತರ ಜೀವನ ಕಷ್ಟಕರವಾಗಿದೆ ಎಂದು ರೈತ ಸಂಘದ ಪಾಲಾಕ್ಷಪ್ಪ ಅವರು ಜಿ.ಪಂ ಸದಸ್ಯ ಬಿ.ಎಂ. ವಾಗೀಶಸ್ವಾಮಿಗೆ ಮನವರಿಕೆ ಮಾಡಿಕೊಟ್ಟರು.

Advertisement

ಸಮೀಪದ ಕೊಮಾರನಹಳ್ಳಿ ಬಳಿ 4.6 ಅಡಿ ಗೇಜ್‌ ಇರುವುದರಿಂದ ಕೊನೆಭಾಗದ ಜಮೀನುಗಳಿಗೆ ನೀರು ಸಿಗುತ್ತಿಲ್ಲ. ಆದ್ದರಿಂದ ನಮ್ಮ ಭಾಗದ ನೀರು ನಮಗೆ ಕೊಡಿ ಎಂದು ಒತ್ತಡ ತರಬೇಕಿದೆ ಎಂದು ವಾಗೀಶಸ್ವಾಮಿ ರೈತರಿಗೆ ತಿಳಿಸಿದರು. ಲಾಕ್‌ಡೌನ್‌ ಆಗಿರುವುದರಿಂದ ಇಂಜಿನಿಯರ್‌ಗಳು ನೀರಿನ ನಿರ್ವಹಣೆ ಮಾಡುತ್ತಿಲ್ಲ. ಚಾನಲ್‌ ಮೇಲೆ ಎಇಇ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ ಮೂವರು ಇಂಜಿನಿಯರ್‌ಗಳು ಮತ್ತು ಇಇ ಅವರು ಪತ್ತೆ. ಇದರಿಂದ ನೀರಿನ ನಿರ್ವಹಣೆ ಹಳಿ ತಪ್ಪಿದೆ ಎಂದು ಕೊನೆಭಾಗದ ರೈತರ ಆರೋಪ ಮಾಡಿದರು. ಆರ್‌2 ಬಳಿ ನೀರಿನ ಮಟ್ಟ ಸರಿಯಾಗಿದೆ ಅಲ್ಲಿಂದ ಮುಂದುವರೆದು ಬಸವಾಪಟ್ಟಣದಿಂದ ಮಲೇಬೆನ್ನೂರು ಕಡೆ ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಕೊಮಾರನಹಳ್ಳಿ ಬಳಿ ನೀರಿನ ಗೇಜ್‌ ಕಡಿಮೆಯಾಗಿದೆ. ಕೊಮಾರನಹಳ್ಳಿ ಬಳಿ 5 ಅಡಿ ನಿರಂತರ ನೀರಿನ ಗೇಜ್‌ ಬಂದಲ್ಲಿ ಕೊನೆಭಾಗದ ಜಮೀನುಗಳಿಗೆ ನೀರು ತಲುಪಿಸಬಹುದು ಎಂದು ಇಎಎ ರವಿಕುಮಾರ್‌ ತಿಳಿಸಿದರು.

ಕೊನೆಭಾಗದ ನಂದಿತಾವರೆ, ಹೊಳೆಸಿರಿಗೆರೆ, ಭಾನುವಳ್ಳಿ, ಕಾಮಲಾಪುರ, ಎಕ್ಕಗೊಂದಿ, ಕಡರನಾಯಕನಹಳ್ಳಿ, ಲಕ್ಕಶೆಟ್ಟಿಹಳ್ಳಿ, ಮತ್ತಿತರ ಕಡೆ ನೀರು ಇಲ್ಲದೆ ಒಡೆ ಕಟ್ಟುತ್ತಿರುವ ಭತ್ತ ಒಣಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ, ಜಿಲ್ಲಾ ಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ, ಕೆಲಸಕ್ಕೆ ಗೈರು ಆಗಿರುವ ಇಂಜಿನಿಯರ್‌ ಗಳನ್ನು ಕೂಡಲೇ ಕರೆಯಿಸಿ ರೈತರಿಗೆ ನೀರಿನ ನಿರ್ವಹಣೆ ಮಾಡುವ ಜವಾಬ್ದಾರಿ ಹೊರಿಸಬೇಕು ಎಂದು ರೈತಸ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ ಆಗ್ರಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next