Advertisement

ನಂದಿಗುಡಿ ಬಸವೇಶ್ವರ ಸ್ವಾಮಿ ರಥೋತ್ಸವ

11:37 AM Mar 07, 2020 | Naveen |

ಮಲೇಬೆನ್ನೂರು: ಸಮೀಪದ ನಂದಿಗುಡಿ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ರಥೋತ್ಸವ ಅಪಾರ ಭಕ್ತರ ಮಧ್ಯೆ ಸಡಗರ, ಸಂಭ್ರಮದಿಂದ ಜರುಗಿತು.

Advertisement

ನಂದಿಗುಡಿ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ಬಸವೇಶ್ವರ ಸ್ವಾಮಿಗೆ ಜೈಕಾರ ಹಾಕುತ್ತ ರಥವನ್ನು ಎಳೆದರು. ರಥದ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತುತ್ತಿ, ಹೆಸರುಕಾಳು, ಅಲಸಂದಿ, ಮೆಕ್ಕೆಜೋಳ ಇನ್ನಿತರೆ ದ್ವಿದಳ ಧಾನ್ಯವನ್ನು ಎಸೆದ ಭಕ್ತಿ ಸಮರ್ಪಿಸಿದರು.

ಶುಕ್ರವಾರ ಬೆಳಗ್ಗೆಯಿಂದಲೇ ಭಕ್ತರು ಬಸವೇಶ್ವರ ಸ್ವಾಮಿಗೆ ಬಾಳೆಹಣ್ಣು, ಕಾಯಿ, ಹೂವು, ಕರ್ಪೂರ, ಊದಿನಕಡ್ಡಿ ಅರ್ಪಿಸಿ ಶ್ರೀ ನಂದಿಯ ದರ್ಶನ ಪಡೆಯಲು ಮುಗಿಬಿದ್ದಿದ್ದರು.

ರಥೋತ್ಸವಕ್ಕೂ ಮುನ್ನ ನಂದಿಗುಡಿ ಮಹಾಸಂಸ್ಥಾನ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ರಾಜಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ವೀರಭದ್ರಸ್ವಾಮಿ ಗುಗ್ಗುಳ, ಹಲಗೆ, ಡೊಳ್ಳು, ಕರಗ ಜನರ ಗಮನ ಸೆಳೆದವು.

ದೊಡ್ಡವರು, ಸಣ್ಣ ಮಕ್ಕಳು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು. ಯುವಕರು ಮತ್ತು ಯುವತಿಯರು ದೇವಸ್ಥಾನ ಮತ್ತು ರಥದ ಬಳಿ ಸೆಲ್ಫಿ ತೆಗೆದುಕೊಳ್ಳುವುದು ಕಂಡುಬಂತು.

Advertisement

ರಥೋತ್ಸವದ ಪ್ರಯುಕ್ತ ಸ್ತ್ರೀಯರ ಸೌಂದರ್ಯ ಸಾಧನೆಗಳ ಅಂಗಡಿಗಳು, ಮಕ್ಕಳ ಆಟಿಕೆ ಅಂಗಡಿಗಳು, ಐಸ್‌ಕ್ರೀಂ ಗಾಡಿಗಳು, ಕಬ್ಬಿನ ಜ್ಯೂಸ್‌ ಪಾನಿಪೂರಿ, ಗೋಬಿ ಮಂಚೂರಿ, ಮಂಡಕ್ಕಿ, ಮೆಣಸಿನಕಾಯಿ ಅಂಗಡಿಗಳು, ಶ್ರೀ ನಂದಿಯ ಫೋಟೋ ಮತ್ತು ಹಾಡಿನ ಸಿಡಿ ಅಂಗಡಿಗಳು ಇದ್ದವು. ಯಕ್ಕನಹಳ್ಳಿ ಬಸವೇಶ್ವರ ದೇವರ ರಥೋತ್ಸವ ಲಕ್ಕಶೆಟ್ಟಿಹಳ್ಳಿಯಲ್ಲಿ ರಥೋತ್ಸವ ಹೊನ್ನಾಳಿ: ತಾಲೂಕಿನ ಯಕ್ಕನಹಳ್ಳಿ ಗ್ರಾಮ ದೇವರಾದ ಶ್ರೀ ಬಸವೇಶ್ವರ ದೇವರ ರಥೋತ್ಸವ ಶುಕ್ರವಾರ ಬೆಳಗಿನ ಜಾವ ವಿಜೃಂಭಣೆಯಿಂದ ನಡೆಯಿತು.

ಭಕ್ತರು ರಥಕ್ಕೆ ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎರಚುವ ಹಾಗೂ ಒಣ ಕೊಬರಿ ಸುಡುವ ಮೂಲಕ ಭಕ್ತಿ ಸಮರ್ಪಿಸಿದರು. ಶ್ರೀ ಬಸವೇಶ್ವರ ದೇವರ ನೂತನ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮಗಳೂ ಅದ್ದೂರಿಯಾಗಿ ನಡೆದವು. ರಥೋತ್ಸವದ ಅಂಗವಾಗಿ ಗುರುವಾರ ಗ್ರಾಮದ ರಾಜ ಬೀದಿಗಳಲ್ಲಿ ಸಣ್ಣತೇರು ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next