Advertisement
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯವು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮಕ್ಷಮದಲ್ಲಿ ಇಂದು ನಡೆಯಿತು.
Related Articles
Advertisement
ಆದಾಯ ಕುಸಿತ: ಕೋವಿಡ್ 19 ಲಾಕ್‍ಡೌನ್ ಜಾರಿಗೊಳ್ಳುವ ಮುನ್ನ ಪ್ರತೀ ತಿಂಗಳು ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಸರಾಸರಿ ಒಂದು ಕೋಟಿಯಿಂದ ಒಂದೂವರೆ ಕೋಟಿ ನಗದು ಸಂಗ್ರಹವಾಗುತಿತ್ತು. ಆದರೆ ಕೋವಿಡ್ 19 ಮಹಾಮಾರಿಯಿಂದಾಗಿ ಮಾದಪ್ಪನ ಹುಂಡಿಯ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಕೋವಿಡ್ 19 ಸೋಂಕು ಪ್ರಾರಂಭವಾದ ನಂತರ ಜಾತ್ರಾ ಮಹೋತ್ಸವಗಳು, ಅಮಾವಾಸ್ಯೆ ಪೂಜಾ ಕೈಂಕರ್ಯಗಳು ಮತ್ತು ಎಣ್ಣೆಮಜ್ಜನ ಸೇವೆಗಳಿಗೆ ಭಕ್ತಾದಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಭಕ್ತಾದಿಗಳ ಸಂಖ್ಯೆಯೂ ಕುಸಿದಿದ್ದು ಅದು ನೇರವಾದಿ ದೇವಸ್ಥಾನದ ಹುಂಡಿಯ ಆದಾಯದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.