Advertisement

ಸರದಿಯಲ್ಲಿ ನಿಂತು ಮಾದಪ್ಪನ ದರ್ಶನ

11:58 AM Jul 06, 2021 | Team Udayavani |

ಹನೂರು: ಎರಡು ತಿಂಗಳುಗಳ ಬಳಿಕ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳು ಕೋವಿಡ್‌ ಮಾರ್ಗಸೂಚಿ ಅನ್ವಯ ಮಾದಪ್ಪನ ದರ್ಶನ ಪಡೆದರು.

Advertisement

ಸೋಮವಾರದಿಂದ ಸರ್ಕಾರ ಅನ್‌ಲಾಕ್‌ ಘೋಷಣೆ ಮಾಡಿದ ಹಿನ್ನೆಲೆ ಬೆಳ್ಳಂ ಬೆಳಗ್ಗೆಯಿಂದಲೇ ಮಾದಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳು ರಂಗ ಮಂದಿರದ ಆವರಣದಲ್ಲಿ ಪ್ರಾಧಿಕಾರದ ವತಿಯಿಂದ ವ್ಯವಸ್ಥೆ ಮಾಡಲಾಗಿದ್ದ ಕುರ್ಚಿಗಳ ಮೇಲೆ ಕುಳಿತು ಬಳಿಕ ಸರತಿ ಸಾಲಿನಲ್ಲಿ ದರ್ಶನಕ್ಕೆ ತೆರಳಿದರು.

ಇದೇ ವೇಳೆ ದೇವಾಲಯದ ಪ್ರವೇಶ ದ್ವಾರ ದಲ್ಲಿಯೇ ಸ್ಯಾನಿಟೈಸರ್‌ಮಾಡಲಾಗಿದ್ದು,ದರ್ಶನಕ್ಕೆ ಆಗಮಿಸಿ ಭಕ್ತಾದಿಗಳು ಸ್ಯಾನಿಟೈಸ್‌ ಆದ ಬಳಿಕ ದರ್ಶನಕ್ಕೆ ತೆರಳಿದರು. ಭಕ್ತಾದಿಗಳಿಗೆ ಮಾಸ್ಕ್ಕಡ್ಡಾಯ ವಾಗಿಸಿದ್ದು, ನೂಕು ನುಗ್ಗಲಿಗೆ ಅವಕಾಶ ಕಲ್ಪಿಸದೆ ಕೋವಿಡ್‌ಮಾರ್ಗಸೂಚಿಪಾಲನೆ ಮಾಡಲಾಯಿತು.

ಹಲವು ನಿರ್ಬಂಧ: ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ6ಗಂಟೆಯವರೆಗೆ ಮಾತ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಶ್ರೀ ಕ್ಷೇತ್ರದಲ್ಲಿನ ಮುಡಿಸೇವೆ, ದಾಸೋಹ ವ್ಯವಸ್ಥೆ,ತೀರ್ಥ ಪ್ರಸಾದ ವಿನಿಯೋಗ, ಹುಲಿವಾಹನೋ ತ್ಸವ, ಬಸವ ವಾಹನೋತ್ಸವ, ಬಂಗಾರದ ರಥೋ ತ್ಸವ ಸೇರಿದಂತೆ ವಿವಿಧ ಸೇವೆ ಮತ್ತು ಉತ್ಸವಗಳಿಗೆ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಅಲ್ಲದೆ ರಾತ್ರಿ ವಾಸ್ತವ್ಯಕ್ಕೂಕೂಡ ನಿರ್ಬಂಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next