Advertisement
ವಿಪಕ್ಷ ಮಾಲ್ಡೀವಿಯನ್ ಡೆಮಾಕ್ರಾಟಿಕ್ ಪಾರ್ಟಿ ಜತೆ ಮಾಜಿ ಅಧ್ಯಕ್ಷ ಗಯೂಮ್ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಸುಪ್ರೀಂ ಕೋರ್ಟ್, ಸಂಸತ್ ಮತ್ತು ಇತರ ಪ್ರಮುಖ ಸರಕಾರಿ ಕಟ್ಟಡಗಳು ಸೇನೆಯ ವಶದಲ್ಲಿವೆ. ಈ ನಡುವೆ ಸ್ವಯಂಪ್ರೇರಿತ ಗಡೀಪಾರು ಮಾಡಿ ಕೊಂಡಿ ಕೊಂಡು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ರುವ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ಭಾರತ ಸರಕಾರವು ಪರಿಸ್ಥಿತಿ ತಹಬಂದಿಗೆ ತರಲು ಮುಂದಾಗ ಬೇಕು ಎಂದು ಕೋರಿದ್ದಾರೆ. “ಭಾರತ ಸರಕಾರ ಕೂಡಲೇ ವಿಶೇಷ ರಾಯಭಾರಿಯೊಬ್ಬರನ್ನು ಮಾಲೆಗೆ ಕಳುಹಿಸ ಬೇಕು. ಇದರ ಜತೆಗೆ ಸೇನೆಯನ್ನೂ ಕಳುಹಿಸಿಕೊಡಬೇಕು. ಬಂಧಿತರನ್ನು ಬಿಡುಗಡೆ ಮಾಡುವಲ್ಲಿ ನೆರವಾಗಬೇಕು’ ಎಂದು ಒತ್ತಾಯಿಸಿದ್ದಾರೆ. ಅಮೆರಿಕ ಸರಕಾರವೂ ಬಿಕ್ಕಟ್ಟು ನಿವಾರಣೆಗೆ ನೆರವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
Related Articles
ಮಾಲ್ಡೀವ್ಸ್ ಬಿಕ್ಕಟ್ಟು ಸಂಬಂಧ ಮಂಗಳವಾರ ಸಂಜೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, “ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂ ಸಿ, ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿರುವುದು ಹಾಗೂ ಮಾಲ್ಡೀವ್ಸ್‌ನಲ್ಲಿ ಬಿಕ್ಕಟ್ಟು ಉಂಟಾಗಿರುವುದು ವ್ಯಾಕುಲ ಉಂಟುಮಾಡಿದೆ’ ಎಂದು ಹೇಳಿದೆ. ಜತೆಗೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಇತರ ರಾಜಕೀಯ ನಾಯಕರನ್ನು ಬಂಧಿಸಿರುವುದು ಕೂಡ ಕಳವಳಕಾರಿ. ನಮ್ಮ ಸರ್ಕಾರವು ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದೂ ಹೇಳಿದೆ.
Advertisement