Advertisement

ಸಮರಾಭ್ಯಾಸ ಆಹ್ವಾನ ತಿರಸ್ಕರಿಸಿದ ಮಾಲ್ಡೀವ್ಸ್‌

03:20 PM Feb 28, 2018 | Team Udayavani |

ಹೊಸದಿಲ್ಲಿ: ಮಾರ್ಚ್‌ 6ರಿಂದ ಭಾರತವು ಆಯೋಜಿಸಿರುವ ಎಂಟು ದಿನಗಳ ನೌಕಾಪಡೆ ಸಮರಾಭ್ಯಾಸ “ಮಿಲನ್‌’ನಲ್ಲಿ ಭಾಗವಹಿಸಲು ಮಾಲ್ದೀವ್ಸ್‌ ನಿರಾಕರಿಸಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ಈ ಮಾಹಿತಿ ನೀಡಿದ್ದಾರೆ. ಅಧಿಕೃತವಾಗಿ ಯಾವುದೇ ಕಾರಣಗಳನ್ನು ನೀಡಿಲ್ಲವಾದರೂ  ಸದ್ಯ ಆ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿರುವುದರಿಂದ ಸಮರಾಭ್ಯಾಸದಲ್ಲಿ ಭಾಗವಹಿಸದೇ ಇರಲು ಅಲ್ಲಿನ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ ನಡೆಯುವ ಈ ಸಮರಾಭ್ಯಾಸದಲ್ಲಿ 16 ರಾಷ್ಟ್ರಗಳು ಭಾಗವಹಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next