Advertisement
ಮಲೇಷಿಯಾದಿಂದ ಆಮದು ಮಾಡಿಕೊಂಡಿರುವ ನೈಸರ್ಗಿಕ ನದಿ ಮರಳಿನ 50 ಕೆ.ಜಿ.ಚೀಲದ ಬೆಲೆ ಬೆಂಗಳೂರಿನಲ್ಲಿ 200 ರೂ.ಇದೆ. ಜಿಎಸ್‌ಟಿ, ಗಣಿ ಇಲಾಖೆಗೆ ಪಾವತಿಸುವ ಶುಲ್ಕ ಹಾಗೂ ಆಮದು ಸುಂಕ ಸೇರಿ ಪ್ರತಿ ಟನ್‌ಗೆ 4000 ರೂ.ನಿಗದಿ ಪಡಿಸಿದೆ. ಅಂತರಕ್ಕೆ ಅನುಗುಣವಾಗಿ 100-200 ರೂ. ಏರಿಳಿತವಾಗಲಿದೆ. ಜನವರಿ ಕೊನೆಯ ವಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ನಂತರ ಕೆ.ಆರ್.ಪುರದ ಚನ್ನಸಂದ್ರದಲ್ಲಿ ಮರಳು ಮೂಟೆ ಮಾರಾಟ ಆರಂಭಿಸಲು ಎಂಎಸ್‌ಐಎಲ್ ಸಿದಟಛಿತೆ ನಡೆಸಿದೆ.
ಉಪವಿಭಾಗಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ಕೂಡ ನಡೆದಿತ್ತು. ಆ ಹಿನ್ನೆಲೆಯಲ್ಲಿ ಜನರಿಗೆ ನೈಸರ್ಗಿಕ ನದಿ ಮರಳನ್ನು ನೇರವಾಗಿ ಪೂರೈಸುವ ಕಾರ್ಯಕ್ಕೆ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು. ಮಲೇಷಿಯಾದಿಂದ ಆಂಧ್ರ ಪ್ರದೇಶದ ಕೃಷ್ಣಪಟ್ಟಣಂಗೆ ಹಡಗಿನಲ್ಲಿ ಮರಳು ಪೂರೈಕೆಯಾಗಲಿದೆ. ನಂತರ ಅಲ್ಲೇ ಚೀಲದಲ್ಲಿ ಭರ್ತಿಯಾಗಿ ರೈಲಿನಲ್ಲಿ ಬೆಂಗಳೂರು ಸೇರಿ ಇತರೆಡೆಗೆ ಪೂರೈಕೆಯಾಗಲಿದೆ. ಮಲೇಷಿಯಾದಿಂದ ಕೃಷ್ಣಪಟ್ಟಣಂಗೆ ಬರುವ ಒಂದು ಟನ್ ಮರಳಿಗೆ 2,300 ರೂ. ತಗಲುತ್ತದೆ. ಬಳಿಕ ಅಲ್ಲೇ ಚೀಲಕ್ಕೆ ಭರ್ತಿಯಾಗಲಿದೆ. ನಂತರ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸಲು ಟನ್‌ಗೆ 1,100 ರೂ. ವೆಚ್ಚವಾಗಲಿದೆ. ಶೇ.5ರಷ್ಟು ಜಿಎಸ್‌ಟಿ ಪಾವತಿಸಲಾಗುತ್ತದೆ. ಜತೆಗೆ ಗಣಿ ಇಲಾಖೆಗೆ ಪ್ರತಿ ಟನ್‌ಗೆ 60 ರೂ. ಪಾವತಿಸಲಾಗುತ್ತದೆ. 100ರಿಂದ 150 ರೂ.ಲಾಭವಿಟ್ಟುಕೊಂಡು ಒಟ್ಟಾರೆ 4,000 ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.
Related Articles
ಬಾಂಗ್ಲಾದೇಶ, μಲಿಫೈನ್ಸ್ ಇತರೆಡೆಯಿಂದಲೂ ಮರಳು ಲಭ್ಯತೆ ಇದೆ. ಎಂಎಸ್‌ಐಎಲ್ ಮರಳು ಯಾವುದಕ್ಕೂ ಪರ್ಯಾಯವಲ್ಲ. ಯಾರು ಬೇಕಾದರೂ ಮರಳು ಆಮದು ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ ಎಂದರು. ಎಂಎಸ್‌ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ಉಪಸ್ಥಿತರಿದ್ದರು. ಆಯ್ದ ಜಿಲ್ಲೆಗಳಲ್ಲಿ ಕೊರತೆ: ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ ಮರಳುಗಾರಿಕೆಗೆ ಪರ್ಮಿಟ್ ನೀಡಿಲ್ಲ.
Advertisement
ಹಾಗಾಗಿ ಸದ್ಯ ಪರ್ಮಿಟ್, ಜಿಎಸ್‌ಟಿಯಿಲ್ಲದೆ ಕೆಲವೆಡೆಯಿಂದ ಮರಳು ಪೂರೈಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಮರಳು ಮೂಟೆ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ.
ಆನ್‌ಲೈನ್ ಬುಕ್ಕಿಂಗ್ ರೈಲ್ವೆ ಸಂಪರ್ಕಕ್ಕೆ ಅನುಗುಣವಾಗಿ ನಗರದ ಹೊರ ಭಾಗಗಳಲ್ಲಿ ಯಾರ್ಡ್ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಮಂಡ್ಯ, ಮೈಸೂರು, ಹುಬ್ಬಳ್ಳಿ ಇತರೆಡೆ ಯಾರ್ಡ್ ಮೂಲಕ ಮಾರಾಟ ಆರಂಭಿಸಲಾಗುವುದು. ಆನ್‌ಲೈನ್ ಬುಕ್ಕಿಂಗ್‌ಗೆ ಕೂಡ ಅವಕಾಶವಿದೆ. ಯಾರ್ಡ್ ವಿಳಾಸ: ಬಿಡದಿ- ಶಿವ ಸಾಗರ ಹೋಟೆಲ್ ಸಮೀಪ, ಮೈಸೂರು ರಸ್ತೆ, ಮೊಬೈಲ್
ಸಂಖ್ಯೆ: 96069 30236- 40. ದೊಡ್ಡಬಳ್ಳಾಪುರ- ಶೀವಪುರ ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ, ಮೊಬೈಲ್ ಸಂಖ್ಯೆ- 96069 30231- 35. ವೆಬ್‌ಸೈಟ್ www.msilonline.com