Advertisement
ಸಂಸ್ಥೆಯು ಮಲೇಷಿಯಾದಿಂದ ಈವರೆಗೆ 935 ಟನ್ ಮರಳನ್ನು ಬೆಂಗಳೂರಿಗೆ ತರಿಸಿದ್ದು, ಇದರ ಮೌಲ್ಯ 37 ಲಕ್ಷ ರೂ. ಈ ಮರಳಿನ ಮಾರಾಟ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೀಗಿರುವಾಗ ವಿಧಾನಸಭೆ ಪ್ರತಿಪಕ್ಷ ನಾಯಕರು ಆರೋಪಿಸಿರುವಂತೆ 5,850 ಕೋಟಿ ರೂ. ಅವ್ಯವಹಾರ ನಡೆಯಲು ಹೇಗೆ ಸಾಧ್ಯ? ಐದು ವರ್ಷದಲ್ಲಿ 180 ಲಕ್ಷ ಟನ್ ಮರಳು ತರಿಸಿದರೆ 7000 ಕೋಟಿ ರೂ. ವಹಿವಾಟು ನಡೆಯುತ್ತಿದ್ದೆಯೇ ಹೊರತು ಅಷ್ಟು ಮೊತ್ತವೂ ಅವ್ಯವಹಾರವಲ್ಲ ಎಂದು ಹಂಪನಗೌಡ ಬಾದರ್ಲಿ ಸ್ಪಷ್ಟನೆ ನೀಡಿದ್ದಾರೆ.
ಪ್ರತಿನಿಧಿಗಳು, ವಕೀಲರ ಸಮ್ಮುಖದಲ್ಲಿ ಟೆಂಡರ್ ತೆರೆಯಲಾಯಿತು.ಫಿಜಾ ಡೆವಲಪರ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಯಾವುದೇ ದಾಖಲೆ ಅಪ್ ಲೋಡ್ ಮಾಡಿರಲಿಲ್ಲ. ಆ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಸ್ವೀಕೃತಿ ಪಡೆಯಲಾಗಿತ್ತು ಎಂದು ಹೇಳಿದ್ದಾರೆ. ಪೊಸೈಡನ್ ಸಂಸ್ಥೆ ದಾಖಲೆಗಳನ್ನು ಟೆಂಡರ್ ಪರಿಶೀಲನಾ ಸಮಿತಿ ಪರಿಶೀಲಿಸಿದ ನಂತರ ತಾಂತ್ರಿಕ ಬಿಡ್ ಅಂಗೀಕರಿಸಿ, ಆರ್ಥಿಕ ಬಿಡ್ ತೆರೆಯಲಾಯಿತು. ಮರಳಿನ ದರ, ಡ್ರೆಡಿjಂಗ್ ದರ, ಮಲೇಷಿಯಾದಲ್ಲಿ ಹಡಗಿಗೆ ಮರಳು ತುಂಬುವ ದರ, ಹಡಗಿನಲ್ಲಿ ಮರಳು ಸಾಗಣೆ ದರ, ಆಮದು ಸುಂಕ, ಬಂದರಿನಲ್ಲಿ ಅಪ್‌ಲೋಡಿಂಗ್, ಸಂಗ್ರಹಣೆ, ಬ್ಯಾಗಿಂಗ್ ಹಾಗೂ ರೈಲು ಬೋಗಿಗೆ ತುಂಬುವ ಇಷ್ಟೂ ಪ್ರಕ್ರಿಯೆಗೆ ಪ್ರತಿ ಟನ್‌ಗೆ 2,300 ರೂ. ದರ ನಮೂದಿಸಿತ್ತು ಎಂದು ವಿವರಿಸಿದ್ದಾರೆ.
Related Articles
Advertisement
ದರದಲ್ಲಿ ಭಾರೀ ಅಂತರ ತಮಿಳುನಾಡಿನಲ್ಲಿ ಪರಿಶೀಲಿಸಲಾಗಿದ್ದು, ಎಲ್ಲಿಯೂ 925 ರೂ. ದರದಲ್ಲಿ ಟನ್ ಮರಳು ಮಾರಾಟ ಕಂಡುಬಂದಿಲ್ಲ. “ಮ್ಯಾನ್ಯುಫ್ಯಾಕ್ಚರ್ ಸ್ಯಾಂಡ್’ ಹಾಗೂ ನೈಸರ್ಗಿಕ ನದಿ ಮರಳಿನ ದರದಲ್ಲಿ ಭಾರಿ ಅಂತರವಿದ್ದು, ಎರಡನ್ನೂ ತಾಳೆ ಮಾಡಲು ಸಾಧ್ಯವಿಲ್ಲ. ಜಿಎಸ್‌ಟಿ ಜತೆಗೆ ಗಣಿ ಇಲಾಖೆ ಸುಂಕ ಸೇರಿದಂತೆ ದರ ನಿಗದಿಪಡಿಸಲಾಗಿದೆ. ಸರ್ಕಾರ ಮತ್ತು ಸಂಸ್ಥೆ ವಿಧಿಸಿರುವ ಎಲ್ಲ ಷರತ್ತು ಒಳಗೊಂಡಂತೆ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.