Advertisement
6ನೇ ಶ್ರೇಯಾಂಕ ಹೊಂದಿರುವ ಪಿ.ವಿ. ಸಿಂಧು ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ತೀವ್ರ ಪೈಪೋಟಿಯೊಡ್ಡಿದ ತನಗಿಂತ ಕೆಳ ರ್‍ಯಾಂಕಿಂಗ್ ಆಟಗಾರ್ತಿ, ಚೀನದ ಯೀ ಮಾನ್ ಜಾಂಗ್ ಅವರನ್ನು 21-16, 13-21, 22-20 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕಳೆದ “ಆಲ್ ಇಂಗ್ಲೆಂಡ್ ಓಪನ್’ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
Related Articles
ವಿಶ್ವದ 9ನೇ ರ್‍ಯಾಂಕಿಂಗ್ ಆಟಗಾರನಾಗಿರುವ ಎಚ್.ಎಸ್. ಪ್ರಣಯ್ ಜಪಾನ್‌ನ ಕೆಂಟ ನಿಶಿಮೊಟೊ ಅವರನ್ನು ಜಿದ್ದಾಜಿದ್ದಿ ಕಾಳಗದಲ್ಲಿ 25-23, 18-21, 21-13ರಿಂದ ಮಣಿಸಿದರು. ಪ್ರಣಯ್ ಅವರಿನ್ನು 57ನೇ ರ್‍ಯಾಂಕಿಂಗ್‌ನ ಇಂಡೋನೇಷ್ಯಾ ಆಟಗಾರ ಕ್ರಿಸ್ಟಿಯನ್ ಆದಿನಾಥ ವಿರುದ್ಧ ಆಡಲಿದ್ದಾರೆ. ಆದಿನಾಥ ಭಾರತದ ಮತ್ತೋರ್ವ ಆಟಗಾರ ಕೆ. ಶ್ರೀಕಾಂತ್‌ಗೆ 16-21, 21-16, 21-11 ಅಂತರದ ಸೋಲುಣಿಸಿದರು. ಇಲ್ಲವಾದರೆ “ಆಲ್ ಇಂಡಿಯನ್ ಸೆಮಿಫೈನಲ್’ ಸ್ಪರ್ಧೆಯೊಂದನ್ನು ಕಾಣಬಹುದಿತ್ತು.
Advertisement