Advertisement

ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌: ಕ್ವಾ. ಫೈನಲ್‌ಗೆ ಸಿಂಧು, ಪ್ರಣಯ್‌

10:44 PM Jul 07, 2022 | Team Udayavani |

ಕೌಲಾಲಂಪುರ: ಪಿ.ವಿ. ಸಿಂಧು ಮತ್ತು ಎಚ್‌. ಎಸ್‌. ಪ್ರಣಯ್‌ “ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ ವಿಭಾಗದಿಂದ ಬಿ. ಸಾಯಿ ಪ್ರಣೀತ್‌, ಪಿ. ಕಶ್ಯಪ್‌ ಹೊರಬಿದ್ದರು.

Advertisement

7ನೇ ಶ್ರೇಯಾಂಕದ ಸಿಂಧು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಚೀನದ ಜಾಂಗ್‌ ಯಿ ಮಾನ್‌ ವಿರುದ್ಧ 21-12, 21-10 ಅಂತರದ ಸುಲಭ ಜಯ ಸಾಧಿಸಿದರು. ವಿಶ್ವದ 32ನೇ ರ್‍ಯಾಂಕಿಂಗ್‌ ಆಟಗಾರ್ತಿಯನ್ನು ಕೇವಲ 28 ನಿಮಿಷಗಳಲ್ಲಿ ಕೆಡವಿದರು.

ಆದರೆ ಸಿಂಧು ಅವರ ಮುಂದಿನ ಸುತ್ತು ಸುಲಭದ್ದಲ್ಲ. ಇಲ್ಲಿ ಅವರು ಚೈನೀಸ್‌ ತೈಪೆಯ ತೈ ಜು ಯಿಂಗ್‌ ಸವಾಲನ್ನು ಎದುರಿಸಬೇಕಿದೆ. ಕಳೆದ ವಾರವಷ್ಟೇ ಮಲೇಷ್ಯಾ ಓಪನ್‌ ಕೂಟದಲ್ಲಿ ವಿಶ್ವದ ನಂ.2 ಯಿಂಗ್‌ ವಿರುದ್ಧ ಸಿಂಧು ಪರಾಭವಗೊಂಡಿದ್ದರು. ಅದು ಕೂಡ ಕ್ವಾರ್ಟರ್‌ ಫೈನಲ್‌ ಹಂತದ ಪಂದ್ಯವೇ ಆಗಿತ್ತು. ಇಲ್ಲಿ ಸಿಂಧು ಸೇಡು ತೀರಿಸಿಕೊಳ್ಳಬಲ್ಲರೇ ಎಂಬುದೊಂದು ನಿರೀಕ್ಷೆ. ಸಿಂಧು ವಿರುದ್ಧ ಯಿಂಗ್‌ 16-5 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ. ಎಚ್‌.ಎಸ್‌. ಪ್ರಣಯ್‌ ಚೈನೀಸ್‌ ತೈಪೆಯ ವಾಂಗ್‌ ಜೂ ವೀ ಅವರನ್ನು 21-19, 21-16 ಅಂತರದಿಂದ ಕೆಡವಿದರು. ಜಪಾನಿನ ಕಾಂಟ ಸುನೆಯಾಮ ಇವರ ಕ್ವಾರ್ಟರ್‌ ಫೈನಲ್‌ ಎದುರಾಳಿ.

ಬಿ. ಸಾಯಿ ಪ್ರಣೀತ್‌ ಅವರನ್ನು ಚೀನದ ಲೀ ಶೆ ಫೆಂಗ್‌ ವಿರುದ್ಧ 14-21, 17-21 ಅಂತರದಿಂದ ಪರಾಭವಗೊಳಿಸಿದರು. ಕಶ್ಯಪ್‌ ಅವರನ್ನು ಆ್ಯಂಟನಿ ಸಿನಿಸುಕ ಗಿಂಟಿಂಗ್‌ 21-10, 21-15ರಿಂದ ಸೋಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next