Advertisement

Malayalam filmmaker: ಮಲಯಾಳಂ ಚಿತ್ರರಂಗದ ದಿಗ್ಗಜ ನಿರ್ದೇಶಕ  ಕೆಜಿ ಜಾರ್ಜ್ ನಿಧನ

01:57 PM Sep 24, 2023 | Team Udayavani |

ಕೊಚ್ಚಿ: ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆಜಿ ಜಾರ್ಜ್(77) ಭಾನುವಾರ(ಸೆ.24 ರಂದು) ನಿಧನರಾಗಿದ್ದಾರೆ. ಕೇರಳದ ಕಾಕ್ಕನಾಡ್ ನಲ್ಲಿರುವ ತನ್ನ ನಿವಾಸದಲ್ಲಿ ಅವರು ನಿಧನರಾಗಿದ್ದಾರೆಂದು ಮಾತೃಭೂಮಿ.ಕಾಮ್ ವರದಿ ತಿಳಿಸಿದೆ.

Advertisement

ಮಲಯಾಳಂ ಚಿತ್ರರಂಗದ ದಿಗ್ಗಜ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಕೆಜಿ ಜಾರ್ಜ್ ಕಳೆದ ಕೆಲ ಸಮಯದಿಂದ ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದಲ್ಲದೆ ಅವರು ವಯೋಸಹಜ ಕಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ವರದಿ ತಿಳಿಸಿದೆ.

ತನ್ನ ಸಿನಿಮಾದ ಮೂಲಕವೇ ಅಪಾರ ಮನೆಮಂದಿಯ ಪ್ರೀತಿಯನ್ನು ಸಂಪಾದಿಸಿದ್ದ ಅವರು ಮಾಲಿವುಡ್‌ ಸಿನಿಮಾರಂಗದ ಎಷ್ಟೋ ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದರು. 1975 ರ ದಶಕದ ಆರಂಭದಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟ ಅವರು, ʼ ಸ್ವಪ್ನಾದನಮ್ʼ ಸಿನಿಮಾದ ಮೂಲಕ ನಿರ್ದೇಶನಕ್ಕಿಳಿದಿದ್ದರು.

ʼಊಲ್ಕಟಾಲ್ʼ, ʼಕೊಳಂಗಲ್ʼ, ʼಮೇಳʼ, ʼಇರಕಲ್ʼ, ʼಯವನಿಕಾʼ, ʼಲೇಖಾಯುಡೆ ಮರಣಂ ಓರು ಫ್ಲ್ಯಾಶ್ ಬ್ಯಾಕ್ʼ, ʼಅದಮಿಂತೆ ವಾರಿಯೆಲುʼ, ʼಕಥಕ್ಕು ಪಿನ್ನಿಲ್ʼ, ʼಮತ್ತೋರಲ್ʼ, ಪಂಚವಡಿ ಪಾಲಂ, ʼಈ ಕಣ್ಣಿ ಕೂಡಿʼ ಮುಂತಾದ ಸಿನಿಮಾಗಳನ್ನು ಮಾಡಿರುವ ಅವರು ಮಾಲಿವುಡ್‌ ಸಿನಿಮಾರಂಗಕ್ಕೆ ಅಡಿಪಾಯವನ್ನು ಹಾಕಿಕೊಟ್ಟವರಲ್ಲಿ ಒಬ್ಬರು. 1998 ರಲ್ಲಿ ʼಎಲವಂಕೋಡು ದೇಶಂʼ ಎನ್ನುವ ಸಿನಿಮಾ ಅವರ ಕೊನೆಯ ಸಿನಿಮಾವಾಗಿತ್ತು.

2015 ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಅವರ ಜೀವಮಾನದ ಕೊಡುಗೆಗಳನ್ನು ಗುರುತಿಸಿ ಅವರಿಗೆ JC ಡೇನಿಯಲ್ ಪ್ರಶಸ್ತಿಯನ್ನು ನೀಡಲಾಗಿತ್ತು.ʼಸ್ವಪ್ನಾದನಮ್ʼ ಸಿನಿಮಾಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಮಲಯಾಳಂನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.

Advertisement

ಅವರು ಪತ್ನಿ ಸಲ್ಮಾ ಮತ್ತು ಇಬ್ಬರು ಮಕ್ಕಳಾದ ತಾರಾ, ಹಾಗೂ ಅರುಣ್‌ ರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next