Advertisement

Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ

05:02 PM Jun 27, 2024 | Team Udayavani |

ಕೊಚ್ಚಿ: ಉಸಿರಾಟದ ಸಮಸ್ಯೆಯಿಂದ ಖ್ಯಾತ ನಟರೊಬ್ಬರ ಮಗ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಮಲಯಾಳಂ (Mollywood )ನಟ ಸಿದ್ದಿಕ್ ಅವರ ಹಿರಿಯ ಪುತ್ರ ರಶೀನ್ (37) ಗುರುವಾರ(ಜೂ.27 ರಂದು) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಉಸಿರಾಟ ಸಮಸ್ಯೆಯಿತ್ತು ವರದಿ ತಿಳಿಸಿದೆ.

Advertisement

ರಶೀನ್‌ ವಿಶೇಷ ಚೇತನ ಮಗು ಎಂದು ಅವರ ತಂದೆ, ನಟ ಸಿದ್ಧಿಕ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಮೃತರು ತಂದೆ, ತಮ್ಮನನ್ನು ಅಗಲಿದ್ದಾರೆ.

ಮಾಲಿವುಡ್‌ ಚಿತ್ರರಂಗದಲ್ಲಿ ಖ್ಯಾತ ನಟರಾಗಿ ʼನಾ ಬಂಗಾರು ತಲ್ಲಿʼ, ʼಕ್ರಿಸ್ಟೋಫʼರ್, ʼಆ ನೇರಂ ಅಲ್ಪ ದೂರಂʼ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿರುವ ಸಿದ್ಧಿಕ್‌ ಅವರು ಅತ್ಯುತ್ತಮ ಪೋಷಕ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next