Advertisement

ಕುಡಿಯುವ ನೀರು ಸರಬರಾಜು, ಮೀಟರ್‌ ರೀಡಿಂಗ್‌ಗೆ ಕ್ರಮಕ್ಕೆ ಸೂಚನೆ 

05:53 AM Feb 24, 2019 | |

ಬಜಪೆ : ಮಳವೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಯಲ್ಲಿ ಬರುವ ಎಲ್ಲ ಗ್ರಾಮಗಳ ಟ್ಯಾಂಕ್‌ಗಳಿಗೆ ನೀರು ಸರಬರಾಜು ಹಾಗೂ ಸಮ ರ್ಪಕ ಮೀಟರ್‌ ರೀಡಿಂಗ್‌ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

Advertisement

ಅವರು ಬಜಪೆ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಶನಿವಾರ ನಡೆದ ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನಿರ್ವಹಣೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಗ್ರಾಮ ಪಂಚಾಯತ್‌ಗಳು ಸಭೆಯಲ್ಲಿ ಟ್ಯಾಂಕ್‌ಗಳಿಗೆ ನೀರು ಇನ್ನೂ ಬಂದಿಲ್ಲ ಎಂದು ಹೇಳಿದ್ದು, ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ತಿಂಗಳಿಗೊಮ್ಮೆ ನಿರ್ವಹಣೆ ಸಮಿತಿ ಸಭೆಯನ್ನು ಕರೆಯಬೇಕು. ಸಮಸ್ಯೆಗಳ ಬಗ್ಗೆ ತಿಳಿದು ಕೊಂಡು ತುರ್ತು ಕ್ರಮಕೈಗೊಳ್ಳಲು ಇದರಿಂದ ಸಾಧ್ಯ ಎಂದರು.

ಹಲವು ಕಡೆಗಳಲ್ಲಿರುವ ನೀರಿನ ಸಮಸ್ಯೆ ಬಗ್ಗೆ ಸಭೆಯಲ್ಲಿ ಶಾಸಕರ ಗಮನಕ್ಕೆ  ತರಲಾಯಿತು. ನಿರ್ವಹಣೆ ಸಮಿತಿ ಅಧ್ಯಕ್ಷೆ ಜೋಕಟ್ಟೆ ಗಾ.ಪಂ.ನ ಅಧ್ಯಕ್ಷೆ ಪ್ರಸಿಲ್ಲಾ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಪಾಧ್ಯಕ್ಷೆ ಪೆರ್ಮುದೆ ಗ್ರಾ.ಪಂ. ಅಧ್ಯಕ್ಷೆ ಸರೋಜಾ , ಜಿಲ್ಲಾ ಪಂಚಾಯತ್‌ ಸದಸ್ಯೆ ವಸಂತಿ ಕಿಶೋರ್‌, ತಾ.ಪಂ. ಸದಸ್ಯರಾದ ಸುಪ್ರೀತಾ ಶೆಟ್ಟಿ, ಉಷಾ ಸುವರ್ಣ, ಶಶಿಕಲಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಬಶೀರ್‌, ಮಳವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್‌ ಅರ್ಬಿ, ಉಪಾಧ್ಯಕ್ಷೆ ವನಜಾ ಶೆಟ್ಟಿ, ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಶೆಟ್ಟಿ, ಪಿಡಿಒ ದೀಪಿಕಾ, ಪೆರ್ಮುದೆ ಗ್ರಾ.ಪಂ. ಉಪಾಧ್ಯಕ್ಷ ಕಿಶೋರ್‌, ಪಿಡಿಒ ಶೈಲಜಾ, ಬಜಪೆ ಗ್ರಾ.ಪಂ. ಉಪಾಧ್ಯಕ್ಷ ಮಹಮ್ಮದ್‌ ಶರೀಫ್‌, ಸದಸ್ಯರಾದ ಲೋಕೇಶ್‌ ಪೂಜಾರಿ, ನಜೀರ್‌, ಆಯಿಷಾ, ಸುಮಾ ಶೆಟ್ಟಿ, ಬಾಳ ಗ್ರಾ.ಪಂ. ಅಧ್ಯಕ್ಷ ಬಿ. ಆದಂ, ಪಿಡಿಒ ವಿಶ್ವನಾಥ ಬಿ., ಜೋಕಟ್ಟೆ ಪಿಡಿಒ ಪ್ರತಿಭಾ, ಕಂದಾವರ ಗ್ರಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಪಿಡಿಒ ರೋಹಿಣಿ ಬಿ., ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್‌, ಪಿಡಿಒ ಜಯಪ್ರಕಾಶ್‌ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಹಾಗೂ ಮಳವೂರು ಗ್ರಾ.ಪಂ. ಪಿಡಿಒ ವೆಂಕಟರಮಣ ಪ್ರಕಾಶ್‌ ನಿರೂಪಿಸಿದರು. ಬಜಪೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಾಯೀಶ್‌ ಪಿಂಟೋ ವಂದಿಸಿದರು.

ಜನಸಂಖ್ಯೆ ಆಧಾರಿಸಿ ಬಿಲ್‌ 
ಸಭೆಯಲ್ಲಿ ಮಾತನಾಡಿದ ಎಂಜಿನಿಯರ್‌ ಪ್ರಭಾ ಕರ, ಗ್ರಾಮ ಪಂಚಾಯತ್‌ಗಳು ವಿದ್ಯುತ್‌ ಬಿಲ್‌ ಕಟ್ಟಬೇಕಾಗಿದೆ. ಜನಸಂಖ್ಯೆ ಆಧಾರಿಸಿ ಬಿಲ್‌ ನಿಗದಿ ಮಾಡಲಾಗಿದೆ. ಬಜಪೆ ಗ್ರಾಮ ಪಂಚಾಯತ್‌ 13,250 ಜನ ಸಂಖ್ಯೆ 2,71500 ರೂಪಾಯಿ, ಮಳ ವೂರು 13,900 ಜನಸಂಖ್ಯೆ 2,85,000 ರೂ., ಮೂಡುಶೆಡ್ಡೆ 11,658 ಜನಸಂಖ್ಯೆ 2,39,000 ರೂ., ಪೆರ್ಮುದೆ 7,842 ಜನಸಂಖ್ಯೆ 1,61000 ರೂ., ಎಕ್ಕಾರು 7,685 ಜನಸಂಖ್ಯೆ 1,57,500 ರೂ., ಬಾಳ 4,878 ಜನಸಂಖ್ಯೆ 1,00,000 ರೂ., ಜೋಕಟ್ಟೆ 9,715 ಜನಸಂಖ್ಯೆ 1,99,000 ರೂ, ಸೂರಿಂಜೆ 6,000 ಜನಸಂಖ್ಯೆ 1,23,000 ರೂ., ಕಂದಾವರ ಸೌಹಾರ್ದನಗರ 1,300 ಜನಸಂಖ್ಯೆ 28,000ರೂ. ಕಟ್ಟಬೇಕಾಗಿದೆ. ಜಂಟಿ ಸಮಿತಿ ಹೆಸರಲ್ಲಿ ಖಾತೆ ತೆರೆಯ ಬೇಕು. ಗ್ರಾಮ ಪಂಚಾಯತ್‌ಗಳು 4 ತಿಂಗಳಿಗೊಮ್ಮೆ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next