Advertisement

ವ್ಯವಸಾಯಕ್ಕಿಂತಲೂ ಕುಡಿವ ನೀರಿಗೆ ಆದ್ಯತೆ : ಕಾಮಗಾರಿ ವೀಕ್ಷಿಸಿದ ಡಿಸಿಎಂ

12:32 PM Sep 12, 2020 | sudhir |

ಮಳವಳ್ಳಿ: ವ್ಯವಸಾಯಕ್ಕಿಂತಲೂ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದೆ. ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಎಲ್ಲಿಯವರೆಗೆ ಬಳಸಲು ಸಾಧ್ಯವೂ ಅಲ್ಲಿಯವರೆಗೆ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದರು.

Advertisement

ಶುಕ್ರವಾರ ತಾಲೂಕಿನ ನೆಟ್ಕಲ್‌ ಗ್ರಾಮದ ಬಳಿ ನಡೆಯುತ್ತಿರುವ ಶಿಂಷಾ ನದಿಯಿಂದ 540 ಕೋಟಿ ರೂ. ವೆಚ್ಚದ ರಾಮನಗರ, ಚನ್ನ  ಪಟ್ಟಣ ಹಾಗೂ ಮಾಗಡಿ ತಾಲೂಕಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಳ್ಳಿಹಳ್ಳಿಗೂ ನೀರು: ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯ ಕಾಮಗಾರಿಯ ನಡೆಯುತ್ತಿದೆ. ಗುಣಮಟ್ಟ ಹಾಗೂ ಯೋಜನೆಯ ರೂಪು ರೇಷು ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಭೇಟಿ ನೀಡಿದ್ದು, ಕಾಮಗಾರಿ ಪೂರ್ಣಗೊಳಿಸಿ ಅದಷ್ಟು ಬೇಗ ನೀರು ಒದಗಿಸಲು ನಮ್ಮ ಸರ್ಕಾರ ಮುಂದಾಗಲಿದೆ. ಅಲ್ಲದೇ ಪೈಪ್‌ಲೈನ್‌ ಹಾದು ಹೋಗಲಿರುವ ಎಲ್ಲಾ ಹಳ್ಳಿಹಳ್ಳಿಗೂ ನೀರು ಪೂರೈಕೆ ಮಾಡಲಾಗುವುದು.

ಮುಂದಿನ ದಿನಗಳಲ್ಲಿ ತಾಲೂ ಕಿನ ಹಲಗೂರು ಭಾಗಕ್ಕೂ ಕಾವೇರಿ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಯೋಜನೆಗೆ ಅಕ್ಷೇಪ: ರಾಮನಗರ ಜಿಲ್ಲೆಗೆ ಸುರಂಗ ಮಾರ್ಗವಾಗಿ ಕಾವೇರಿ ನೀರು ತೆಗೆದುಕೊಂಡು ಹೋಗುತ್ತಿರುವುದು ಯೋಜನೆ ಅನಧಿಕೃತನಾ ಎಂದು ಬಿಜೆಪಿ ಮುಖಂಡ ಡಾ.ಕಪನೀಗೌಡ ಸೇರಿದಂತೆ ಹಲವರು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಅವರ ಬಳಿ ಅಕ್ಷೇಪ ವ್ಯಕ್ತಪಡಿಸಿದರು.

Advertisement

ಸೂಕ್ತ ವ್ಯವಸ್ಥೆ ಕಲ್ಪಿಸಿ: 540 ಕೋಟಿ ರೂ. ವೆಚ್ಚದ ಕಾಮಗಾರಿಯಿಂದ ನಮ್ಮ ತಾಲೂಕಿನ ಜನತೆಗೆ ಯಾವುದೇ ಪ್ರಯೋಜನವಿಲ್ಲ. ನಮ್ಮ ತಾಲೂಕಿನ ಜನರಿಗೆ ಮೊದಲು ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿ. ಮಳವಳ್ಳಿ ದೊಡ್ಡಕೆರೆ ಮತ್ತು ಮಾರೇಹಳ್ಳಿ ಕೆರೆ ಇದ್ದರೂ ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಈ ಹಿಂದೆ ಇದ್ದವರನ್ನು ಇದುವರೆಗೂ ಏಕೆ ನೀವು ಕೇಳಲಿಲ್ಲ. ಈಗ ನೀರು ಸಿಗುತ್ತಿದೆ ಎಂದು ಸಂತೋಷ ಪಡಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡೋಣ ಎಂದು ತಿಳಿಸಿದರು. ಇದಕ್ಕೂ ಮುನ್ನ ಪಟ್ಟಣದ ಅನಂತ್‌ ರಾಂ ಸರ್ಕಲ್‌ ಬಳಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಅವರನ್ನು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಮಾಗಡಿ ಶಾಸಕ ಎ.ಮಂಜುನಾಥ್‌, ರಾಮನಗರ ಡೀಸಿ ಅರ್ಚನಾ, ಉಪವಿಭಾಗಾಧಿಕಾರಿ ಸೂರಜ್‌, ತಹಶೀಲ್ದಾರ್‌ ಕೆ.ಚಂದ್ರಮೌಳಿ, ಡಿವೈಎಸ್‌ಪಿ ಎಂ.ಜೆ.ಪೃಥ್ವಿ, ಸಿಪಿಐ ಎ.ಕೆ.ರಾಜೇಶ್‌, ಬಿಜೆಪಿ ರಾಜ್ಯ ಮುಖಂಡ ಎಚ್‌.ಎಸ್‌.ಅಶೋಕ್‌ ಕುಮಾರ್‌, ಮುಖಂಡರಾದ ಯಮದೂರು ಸಿದ್ದರಾಜು, ಕಫ‌ನಿಗೌಡ, ಕೆ.ಸಿ.ನಾಗೇಗೌಡ, ಹೆಬ್ಬಣಿ ಬಸವರಾಜು, ತಳಗವಾದಿ ಗಿರೀಶ್‌, ಕಾಂತರಾಜು, ದೇವರಾಜು ಮತ್ತು ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next