ಯಲ್ಲಾಪುರ: ತಾಲೂಕಿನ ಚಂದ್ಗುಳಿ ಪಂಚಾಯಿತಿವ್ಯಾಪ್ತಿಯ ಹುತ್ಕಂಡದ ಕಬ್ಬಿನಗದ್ದೆ ಗ್ರಾಮದ ಉಮೇಶ ಎನ್. ಮರಾಠಿ(48)ಮೃತಪಟ್ಟಿದ್ದು, ರಕ್ತದ ಪರೀಕ್ಷಾ ವರದಿ ಬಂದ ನಂತರ ನಿಖರವಾಗಿ ಯಾವ ಕಾಯಿಲೆ ಎಂದು ಗೊತ್ತಾಗುತ್ತದೆ. ಮೇಲ್ನೋಟಕ್ಕೆಮಲೇರಿಯಾ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಸುರಕ್ಷತೆಗೆ ಮುಂದಾಗಿದೆ ಎಂದು ಟಿಎಚ್‌ಒ ಡಾ|ನರೇಂದ್ರ ಪವಾರ್ ತಿಳಿಸಿದ್ದಾರೆ.
ಈಗಾಗಲೇ ರಕ್ತದ ಮಾದರಿ ಪಡೆಯಲಾಗಿದ್ದು ಮಲೇರಿಯಾ, ಮಂಗನಕಾಯಿಲೆ ಎಲ್ಲ ಪರೀಕ್ಷೆನಡೆಸಲಾಗುತ್ತದೆ. ಉಮೇಶ ಇವರ ಮಗ 15 ವರ್ಷದ ವಿದ್ಯಾರ್ಥಿ ಗೌತಮ ಉಮೇಶ ಮರಾಠಿಕೂಡಾಈಗ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕುಆಸ್ಪತ್ರೆ ಈತನಿಗೆ ಎಲ್ಲ ಸಹಕಾರ ನೀಡುತ್ತಿದೆ. ಕಿಮ್ಸ್‌ನಲ್ಲಿಲಭ್ಯವಿಲ್ಲದ ಚಿಕಿತ್ಸೆಗಳನ್ನು ಬೇರೆ ಕಡೆಗೆ ಮಾಡಿಸಲು ಕ್ರಮಕೈಗೊಂಡಿದೆ ಎಂದು ಡಾ| ಪವಾರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ರೋಗಿಯ ಮನೆ ಮತ್ತು ಸಮೀಪ ಎರಡು ಕಿ.ಮೀ. ಅಂತರದ ಊರಿನಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಆರೋಗ್ಯ ಸಿಬ್ಬಂದಿ ಚಿಕಿತ್ಸೆ ಜ್ವರ ಪರೀಕ್ಷೆ ಇನ್ನಿತರೆ ಕಾರ್ಯದಲ್ಲಿ ತೊಡಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಡಿಎಚ್‌ಒ ಡಾ| ಶರತ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ|ರಮೇಶರಾವ್, ಕೀಟ ತಜ್ಞಜ್ಯೋತ್ಸ್ನಾ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯಪಂಚಾಯಿತಿ ಪಿಡಿಒ, ಅಧ್ಯಕ್ಷ, ಸದಸ್ಯರು ಭೇಟಿ ನೀಡಿ ಮುನ್ನೆಚ್ಚರಿಕೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ.
ಗೌತಮ ಮರಾಠಿ ಓದುತ್ತಿರುವ ಕಾಳಮ್ಮನಗರ ಪ್ರೌಢಶಾಲೆ ಹಾಗೂ ವಸತಿನಿಲಯಗಳ 80 ಮಕ್ಕಳಜ್ವರ, ರಕ್ತ ಪರೀಕ್ಷೆ ನಡೆಸಿದ್ದು ಎಲ್ಲಿಯೂ ಮಲೇರಿಯಾಪಾಸಿಟಿವ್ ಬಂದಿಲ್ಲ ಎಂದು ದೃಢಪಡಿಸಿದ್ದಾರೆ.
ನಾಲ್ವರು ತಾಲೂಕಾಸ್ಪತ್ರೆ ಸಿಬ್ಬಂದಿಗಳನ್ನು ಕಿಮ್ಸ್ ಆಸ್ಪತ್ರೆಗೆ ರೋಗಿಯನ್ನು ನೋಡಿಕೊಳ್ಳುವುದಕ್ಕೆನಿಯೋಜಿಸಿರುವುದಾಗಿ ತಾಲೂಕಾ ವೈದ್ಯಾಧಿ ಕಾರಿಗಳು ತಿಳಿಸಿದ್ದಾರೆ.
ಊರಲ್ಲಿ ಭಯ: ಎಷ್ಟೇ ಜಾಗೃತಿ, ಕಟ್ಟುನಿಟ್ಟಿನ ಕ್ರಮಅನುಸರಿಸಿದರೂ ಊರಲ್ಲಿ ಭಯದ ವಾತಾವರಣಸೃಷ್ಟಿಯಾಗಿದೆ. ಸುತ್ತಮುತ್ತಲಿನ ಶಾಲೆ, ಅಂಗನವಾಡಿ ಮಕ್ಕಳಲ್ಲಿ ಭಯ ಶುರುವಾಗಿದೆ. ಹುತ್ಕಂಡ ಭಾಗದಲ್ಲಿ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮಗಳಿಗೆ ಆರೋಗ್ಯ ಇಲಾಖೆ ಮುಂದಾಗಬೇಕಿದೆ.