Advertisement

ಕುತ್ತಾರುವಿನಲ್ಲಿ ಮಲೇರಿಯಾ ಮಾಸಾಚರಣೆ

03:45 AM Jul 02, 2017 | Team Udayavani |

ಕುತ್ತಾರು:  ಸಾಮಾಜಿಕ ಚಟುವಟಿಕೆಯಂತಹ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕಲಿಯಲು ಪೂರಕವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮನೋಸ್ಥಿತಿಯನ್ನು ಬೆಳೆಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ಎಂದು ಜಿಲ್ಲಾ ಪಂಚಾಯತ್‌ ಸದಸ್ಯೆ  ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.

Advertisement

ಅವರು ಸಂತ ಆಗ್ನೆಸ್‌ ಕಾಲೇಜು ಮಂಗಳೂರು ಇದರ  ಸಮುದಾಯದತ್ತ ಆಗ್ನೆಸ್‌, ಜಿಲ್ಲಾ ಪಂಚಾಯತ್‌ ಮಂಗಳೂರು ಇದರ ಮಲೇರಿಯಾ ಮಾಸಾಚರಣೆ- 2017ರ ಪ್ರಯುಕ್ತ ನಡೆದ “ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸಿ’  ಕಾರ್ಯಕ್ರಮಕ್ಕೆ ಕುತ್ತಾರು ದುರ್ಗಾ ವಾಹಿನಿ ಮಹಿಳಾ ಮಂಡಳಿಯಲ್ಲಿ ಶನಿವಾರ  ಚಾಲನೆ ನೀಡಿ ಮಾತನಾಡಿದರು.
ಪರಿಸರದ ಸ್ವತ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಕೈಯಲ್ಲಿ  ಕೆಸರಾದರೂ ಆರೋಗ್ಯದ ಮತ್ತು ಸಮಾಜದ ಹಿತದೃಷ್ಟಿಯಿಂದ ಶುಚಿತ್ವವನ್ನು ಕಾಪಾಡಬೇಕಿದೆ. ಇದನ್ನು ಮುಂದಿಟ್ಟುಕೊಂಡು  ಸೋಮೇಶ್ವರ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಮುನ್ನೂರು, ಅಂಬ್ಲಿಮೊಗರು, ಹರೇಕಳ ಮತ್ತು  ಸೋಮೇಶ್ವರ ಗ್ರಾ.ಪಂ. ವ್ಯಾಪ್ತಿಗಳಲ್ಲಿ  ವಿದ್ಯಾರ್ಥಿನಿಯರೇ ಸೇರಿ ಸ್ವತ್ಛತಾ ಆಂದೋಲನ  ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.  

ಮುಂದೆ  ಕೋಟಿ ವೃಕ್ಷ ಆಂದೋಲನದಡಿಯಲ್ಲಿ  ಇನ್ನಷ್ಟು ಗಿಡಗಳನ್ನು  ಆಗ್ನೆಸ್‌ ಕಾಲೇಜಿನ ವಿದ್ಯಾರ್ಥಿ ನಿಯರು ನೆಡುವವರಿದ್ದು,  ಇದರ ಜತೆಗೆ ಗದ್ದೆಗಳಲ್ಲಿ ನೇಜಿ ನೆಡುವ  ಕಾರ್ಯದಲ್ಲೂ ಭಾಗವಹಿಸಲಿದ್ದಾರೆ  ಎಂದು ಅವರು ತಿಳಿಸಿದರು. 

ಮುನ್ನೂರು  ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರದ ಆವರಣದಲ್ಲಿ ವಿದ್ಯಾರ್ಥಿನಿಯರೇ  ಸೇರಿಕೊಂಡು  ಇಂಗು ಗುಂಡಿಯನ್ನು ತೆರೆದರು.  

ತಲಾ  ಐವರು ವಿದ್ಯಾರ್ಥಿನಿಯರಂತೆ ಹಾರೆ, ಪಿಕ್ಕಾಸು ಹಿಡಿದು ಕಠಿನವಾಗಿದ್ದ ಭೂಮಿಯನ್ನು ಅಗೆದು  ಐದು ಇಂಗು ಗುಂಡಿಗಳನ್ನು ತೆರೆದರು. 
 
ಪಟ್ಟಣ ಪ್ರದೇಶದ  ವಿದ್ಯಾರ್ಥಿನಿ ಯರು ಗ್ರಾಮೀಣ ಭಾಗದಲ್ಲಿ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ, ಯುವಕರನ್ನೂ ಮೀರಿಸುವ ಕೆಲಸ ದಲ್ಲಿ ಪಾಲ್ಗೊಂಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರ ವಾಯಿತು.
 
ಇನ್ನಾದರೂ ಇಂಗು ಗುಂಡಿ ಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲೆದೋರುವ  ನೀರಿನ ಅಭಾವ ಪರಿಹಾರವಾಗಬಹುದು ಎನ್ನುವ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂತು.  ಇದೇ ಸಂದರ್ಭ ವಿದ್ಯಾರ್ಥಿ ನಿಯರಿಂದ  ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಳಿಯಿಂದ ಕುತ್ತಾರು ಸರಕಾರಿ ಶಾಲೆಯವರೆಗೆ ಮಲೇರಿಯಾ ಮಾಸಾಚರಣೆ-2 017  ಜಾಗೃತಿ ಜಾಥಾ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಆಗ್ನೆಸ್‌ ಕಾಲೇಜಿನ ಪ್ರಾಂಶು ಪಾಲೆ ಡಾ| ಎಂ. ಜೆಸ್ವೀನಾ ಎ.ಸಿ. ವಹಿಸಿದ್ದರು. 

ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಉಚ್ಚಿಲ್‌, ಮೂನ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೂಪಾ ಆರ್‌. ಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುದೇಶ್‌, ಮಹಿಳಾ ಮಂಡಲ ಪ್ರಧಾನ ಕಾರ್ಯದರ್ಶಿ ಆಶಾಲತಾ ಕುಶಾಲಪ್ಪ, ಅಂಗನ ವಾಡಿ ಕಾರ್ಯಕರ್ತೆ ಸುನೀತಾ ಗಟ್ಟಿ ಉಪಸ್ಥಿತ ರಿದ್ದರು. ಸಮುದಾಯದತ್ತ ಆಗ್ನೇಸ್‌ ಇದರ ಸಂಯೋಜಕ ಚಂದ್ರಮೋಹನ್‌ ಮರಾಠೆ ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.  ಎಡಿಲೆಟ್‌ ಸಲ್ದಾನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next