Advertisement
ಮಲಪ್ಪುರಂ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೊಂಡೊಟ್ಟಿ, ಮಂಜೇರಿ, ಪೆರಿಂತಲಮಣ್ಣ, ಮಂಕಡ , ಮಲಪ್ಪುರಂ, ವೆಂಗರ ಮತ್ತು ವಲ್ಲಿಕುನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಕುಂಞಾಲಿಕುಟ್ಟಿ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎನ್. ಶ್ರೀಪ್ರಕಾಶ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
Related Articles
ಮಾಜಿ ಸಚಿವರೂ ಆಗಿರುವ ಕುಂಞಾnಲಿಕುಟ್ಟಿ ಸಂಸದರಾಗಿ ಇದೇ ಮೊದಲ ಬಾರಿ ಸಂಸತ್ತು ಪ್ರವೇಶಿಸಲಿದ್ದಾರೆ. ಮಲ್ಲಪ್ಪುರಂ ವ್ಯಾಪ್ತಿಯಲ್ಲಿರುವ ವೆಂಗರ ವಿಧಾನಸಭೆ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಮಲಪ್ಪುರಂ ಹಿಂದಿನಿಂದಲೂ ಮುಸ್ಲಿಂ ಲೀಗ್‌ನ ಭದ್ರಕೋಟೆಯಾಗಿತ್ತು. ಇಲ್ಲಿ ಗೆಲ್ಲುವುದು ಯಾರೆಂಬ ಕುತೂಹಲ ಇರುವುದಿಲ್ಲ. ಮತಗಳ ಅಂತರ ಮಾತ್ರ ಕುತೂಹಲ ಹುಟ್ಟಿಸುತ್ತದೆ. ಇ.ಅಹ್ಮದ್ ಅಕಾಲಿಕ ನಿಧನದಿಂದಾಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಬೀಸಿದ್ದರೂ ಕುಂಞಾಲಿಕುಟ್ಟಿ ಗೆಲುವಿನ ಅಂತರ ಕಡಿಮೆಯಾಗಿರುವುದು ಆಶ್ಚರ್ಯವುಂಟು ಮಾಡಿದೆ.
Advertisement
ಜಾತ್ಯತೀತ ನಿಲುವಿನ ಗೆಲುವು ಮಲಪ್ಪುರಂ: ಕುಂಞಾಲಿಕುಟ್ಟಿ ಮಲಪ್ಪುರಂ ಉಪಚುನಾವಣೆಯಲ್ಲಿ ತನಗೆ ದಕ್ಕಿದ ಅಭೂತಪೂರ್ವ ಗೆಲುವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಜಾತ್ಯತೀತ ನಿಲುವಿಗೆ ಅರ್ಪಿಸಿದ್ದಾರೆ. ಜನರು ಯುಡಿಎಫ್ನ ಜಾತ್ಯತೀತ ನಿಲುವನ್ನು ಒಪ್ಪಿಕೊಂಡು ಮತ ಹಾಕಿದ್ದಾರೆ. ಎಲ್‌ಡಿಎಫ್ ಪಾಲಿಗೆ ಭಾರೀ ಹಿನ್ನಡೆ. ಆಡಳಿತದಲ್ಲಿರುವ ಹೊರತಾಗಿಯೂ ಅದಕ್ಕೆ ನಿರೀಕ್ಷಿತ ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಗೆಲುವಿನ ಅಂತರ ನಾವು ನಿರೀಕ್ಷಿಸಿರುವುದಕ್ಕಿಂತ ತುಸು ಕಡಿಮೆಯಾಗಿದೆ. ಆದರೆ ಜನರು ಮುಸ್ಲಿಂ ಲೀಗ್ ಮೇಲಿಟ್ಟ ವಿಶ್ವಾಸಕ್ಕೆ ಆಭಾರಿಯಾಗಿರುತ್ತೇವೆ ಎಂದು ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಕೆಪಿಎ ಮಜೀದ್ ಹೇಳಿದ್ದಾರೆ. 2 ಲಕ್ಷಕ್ಕೂ ಅಧಿಕ ಮತದಿಂದ ಕುಂಞಾnಲಿಕುಟ್ಟಿ ಗೆಲ್ಲುತ್ತಾರೆಂದು ಮಜೀದ್ ಭವಿಷ್ಯ ಹೇಳಿದ್ದರು. ಸರಕಾರದ ಮೌಲ್ಯಮಾಪನವಲ್ಲ: ಸಿಎಂ
ತಿರುವನಂತಪುರ: ಮಲಪ್ಪುರಂ ಲೋಕಸಭಾ ಕ್ಷೇತ್ರ ಉಪಚುನಾವಣೆಯ ಫಲಿತಾಂಶ ಸರಕಾರದ ಸಾಧನೆಯ ಮೌಲ್ಯಮಾಪನವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ. ಕ್ಷೇತ್ರದಲ್ಲಿ ಅನುಕಂಪದ ಅಲೆ ಇದ್ದ ಕಾರಣ ಯುಡಿಎಫ್ ಮತಗಳಿಕೆ ಪ್ರಮಾಣ ಹೆಚ್ಚಾಗಿದೆಯೇ ಹೊರತು ಸರಕಾರವನ್ನು ಜನರು ತಿರಸ್ಕರಿಸಿದ್ದಾರೆ ಎನ್ನುವುದು ಸರಿಯಲ್ಲ. ಹಾಗೇ ನೋಡಿದರೆ ಬಿಜೆಪಿಯ ಮತಗಳಿಕೆಯೂ ಕುಸಿದಿದೆ. ಉಪಚುನಾವಣೆಯ ಫಲಿತಾಂಶವನ್ನು ದಿಕ್ಸೂಚಿ ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ.