Advertisement
ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ಕೂಡ ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ಮತ್ತು ಮಸೀದಿ ಆಡಳಿತ ಮಂಡಳಿ ಪರ ವಕೀಲ ಎಂ.ಪಿ. ಶೆಣೈ ವಾದ – ಪ್ರತಿವಾದ ಮಂಡಿಸಿದರು. ಆದರೆ ಈ ಬಗ್ಗೆ ಯಾವುದೇ ಆದೇಶ ನೀಡಬಾರದೆಂದು ಹೈಕೋರ್ಟ್ ನಿರ್ದೇಶನ ನೀಡಿರುವುದರಿಂದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಆದೇಶದ ಅನಂತರ ಜೂ. 17ಕ್ಕೆ ನಡೆಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.
ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಮಸೀದಿ ಆಡಳಿತ ಮಂಡಳಿಯ ಪರ ವಕೀಲರು ವಾದಿಸಿದ್ದಾರೆ. “ಈ ಅರ್ಜಿ ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ’ ಎಂದು ವಿಹಿಂಪ ಪರ ವಕೀಲರು ವಾದಿಸಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ : ಮಾಜಿ ಕ್ರಿಕೆಟಿಗರು, ಅಂಪೈರ್‌ಗಳಿಗೆ ಪಿಂಚಣಿ ದುಪ್ಪಟ್ಟು: ಬಿಸಿಸಿಐ
Related Articles
ಮಂಗಳೂರಿನ ಸಿವಿಲ್ ನ್ಯಾಯಾ ಲಯವು ಅರ್ಜಿ ವಿಚಾರಣೆಯ ಅಧಿ ಕಾರ ವ್ಯಾಪ್ತಿ ಕುರಿತು ಆದೇಶ ನೀಡುವ ಮೊದಲು ಜ್ಞಾನವಾಪಿ ಮಾದರಿ ಯಲ್ಲಿ ಕಮಿಷನರ್ ಮೂಲಕ ಸರ್ವೇ ನಡೆಸುವ ಬಗ್ಗೆ ಆದೇಶ ನೀಡಬೇಕು ಎಂದು ವಿಹಿಂಪ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾ ರಣೆ ನಡೆ ಸಿದ ಹೈಕೋರ್ಟ್ ಈ ಬಗ್ಗೆ ಸೋಮವಾರ ಮಂಗಳೂರಿನ ಸಿವಿಲ್ ನ್ಯಾಯಾಯಲಕ್ಕೆ ನಿರ್ದೇಶನ ನೀಡಿತ್ತು. ವಿಚಾರಣೆ ನಡೆಸಿದರೂ ಯಾವುದೇ ಆದೇಶ ನೀಡಬಾರದು ಎಂದಿತ್ತು. ಮಳಲಿ ಮಸೀದಿಯಲ್ಲಿ ದೇವಾಲಯ ಹೋಲುವ ರಚನೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೇ ನಡೆಸಬೇಕು ಎಂದು ವಿಹಿಂಪ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರಿಂದ ಈ ಬಗ್ಗೆ ಹೈಕೋರ್ಟ್ ನೀಡಲಿರುವ ಆದೇಶ ಕುತೂಹಲ ಮೂಡಿಸಿದೆ.
Advertisement