ಮಂಗಳೂರು: ಮಲೈಕಾ ಸೊಸೈಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬ್ರಾಂಚ್ ಮ್ಯಾನೇಜರ್ ರೀನಾ ಜೋಶ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಮಲೈಕಾ ಸೊಸೈಟಿ ಹೆಸರಿನಲ್ಲಿ ಗ್ರಾಹಕರಿಂದ ಕೋಟ್ಯಾಂತರ ರೂ. ಠೇವಣಿ ಸಂಗ್ರಹಿಸಿ ಅದನ್ನು ಹಿಂತಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್ ಹಾಗೂ ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲಾಗಿದೆ.
ಕರಾವಳಿ ಭಾಗದಲ್ಲಿ ಹಲವು ಕಡೆ ಶಾಖೆಗಳನ್ನು ಹೊಂದಿರುವ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿತ್ತ. ಹೀಗಾಗಿ ಸಾವಿರಾರು ಜನರು ಇದರಲ್ಲಿ ಹಣ ಠೇವಣಿ ಇಟ್ಟಿದ್ದರು. ಆದರೆ ಅವಧಿ ಮುಗಿದ ಬಳಿಕ ಹಣ ಮರಳಿಸದೇ ಇದ್ದು, ಹಣವನ್ನು ಸೊಸೈಟಿ ಮಾಲಕರು ತಮ್ಮ ಖಾತೆಗೆ ಜಮಾ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಬೇಡ ಬೇಡವೆಂದರೂ ಗಿಫ್ಟ್ ಕಳುಹಿಸಿ ಮಹಿಳೆಗೆ 14.91 ಲ.ರೂ. ವಂಚನೆ!
ಈ ಕುರಿತಂತೆ ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್ ಹಾಗೂ ಆಡಳಿತ ಮಂಡಳಿ ವಿರುದ್ದ ನೂರಾರು ಮಂದಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.