Advertisement

ಮಕ್ಕಳಿಂದಲೇ ಮಲಗುಂಡಿ ಸ್ವತ್ಛತೆ- ಮಾಲೂರು ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೃತ್ಯ

11:50 PM Dec 17, 2023 | Team Udayavani |

ಕೋಲಾರ: ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಸ್ವತ್ಛತಾ ಕಾರ್ಯ ಮಾಡಿಸಿರುವ ಪ್ರಕರಣ ಸಂಬಂಧ ಇಲಾಖಾ ತನಿಖೆ ಕಾದಿರಿಸಿ  ಪ್ರಾಂಶುಪಾಲೆ ಪಿ. ಭಾರತಮ್ಮ, ಪ್ರಭಾರ ನಿಲಯಪಾಲಕ ಮಂಜುನಾಥ್‌, ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.

Advertisement

ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲಗುಂಡಿ ಸ್ವತ್ಛತೆ ಮಾಡಿಸಿರುವ ಕುರಿತ ಫೋಟೋ, ವೀಡಿಯೋಗಳು ಹರಿದಾಡಿದ ಹಿನ್ನೆ°ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾ ಸಮನ್ವಯಾಧಿಕಾರಿಗಳು  ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅವರು ನೀಡಿದ್ದ ವರದಿ ಹಿನ್ನೆಲೆಯಲ್ಲಿ ಕ್ರೈಸ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ನವೀನ್‌ ಕುಮಾರ್‌ ರಾಜು ಅಮಾನತು ಮಾಡಿದ್ದಾರೆ.

ಸಮಗ್ರ ತ‌ನಿಖೆಗೆ ಆದೇಶ

ಈ ಬಗ್ಗೆ  ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ವಿಕೃತಿ ಮೆರೆದ ಪ್ರಾಂಶುಪಾಲೆ, ಶಿಕ್ಷಕ ಹಾಗೂ ವಾರ್ಡನ್‌ ಅವರನ್ನು ಅಮಾನತು ಮಾಡಲಾಗಿದೆ. ಸಮಗ್ರ ತನಿಖೆಗೆ ಆದೇಶ ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದರು.

ಶಾಲೆಗೆ ನ್ಯಾಯಾಧೀಶರ ಭೇಟಿ

Advertisement

ವೀಡಿಯೋ ವೈರಲ್‌ ಆದ ಹಿನ್ನೆಲೆ ಯಲ್ಲಿ, ಶಾಲೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಸುನೀಲ್‌ ಎಸ್‌. ಹೊಸಮನಿ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಇಬ್ಬರ ಬಂಧನ, ಇಬ್ಬರು ಪರಾರಿ

ಒಟ್ಟು ನಾಲ್ವರ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು,  ಪ್ರಾಂಶುಪಾಲೆ ಭಾರತಮ್ಮ ಹಾಗೂ ಸಹ ಶಿಕ್ಷಕ ಮುನಿಯಪ್ಪ ಅವರನ್ನು ಬಂಧಿಸಲಾಗಿದೆ. ವಾರ್ಡನ್‌ ಮಂಜುನಾಥ್‌, ಅತಿಥಿ ಶಿಕ್ಷಕ ಅಭಿಷೇಕ್‌  ಪರಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next