Advertisement
ಮುಂಬಯಿ: ಮಲಾಡ್ ಪೂರ್ವದ ತಾನಾಜಿ ನಗರದ ಕುರಾರ್ ವಿಲೇಜ್‌ನಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾಪರಮೇಶ್ವರಿ ಮಂದಿರದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವವು ಎ. 20ರಂದು ಚಾಲನೆಗೊಂಡಿತು.
Related Articles
Advertisement
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪ್ರಸಾದ್ ಆರ್. ಕೋಟ್ಯಾನ್, ವತ್ಸಲಾ ಎಸ್. ಕೋಟ್ಯಾನ್, ಕಲಾವತಿ ಜಿ. ಕೋಟ್ಯಾನ್, ಪ್ರದೀಪ್ ಪಿ. ಅಂಚನ್, ಲತಾ ಜಿ. ಕುಂದರ್, ಆಶಾ ಆರ್. ಕೊಟ್ಟಾರಿ, ಮೀನಾ ಡಿ. ಕೋಟ್ಯಾನ್, ವಾಸು ಎಂ. ಪೂಜಾರಿ, ರತ್ನಾಕರ ಡಿ. ಕೋಟ್ಯಾನ್, ವನಜಾ ಜೆ. ಪೂಜಾರಿ, ರೇಖಾ ವಿ. ಜತ್ತನ್, ಕವಿತಾ ಆರ್. ಭಟ್, ಶಕುಂತಲಾ ಬಿ. ಸುವರ್ಣ, ಸುಜಾತಾ ಎಂ. ಶೆಟ್ಟಿ, ಆಮಂತ್ರಿತ ಸದಸ್ಯರಾದ ಯಮುನಾ ಆರ್. ಕೋಟ್ಯಾನ್, ರಾಧಾ ಎಸ್. ಕೋಟ್ಯಾನ್, ಲಕ್ಷಿ¾à ಎಚ್. ಕೋಟ್ಯಾನ್, ಜಯ ಸುಜೀತ್, ಸ್ಮಿತಾ ಅಬು, ವಿಶ್ವನಾಥ ಎ. ಬೆಲ್ಚಡ, ಪ್ರೇಮಾ ವಿ. ಪೂಜಾರಿ, ಗಿರಿಜಾ ವಿ. ಶೆಟ್ಟಿ, ಭಾರತಿ ಎಸ್. ಕೋಟ್ಯಾನ್, ಶಾಂತಾ ಪೂಜಾರಿ, ಸಿದ್ಧರಾಮ ಗೌಡ ಸೇರಿದಂತೆ ಸದಸ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಎ. 22ರಂದು ಬೆಳಗ್ಗೆ ಮಹಾಗಣಪತಿ ಹೋಮ, ನವಕ ಕಲಶ ಪ್ರದಾನ, ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಮಂತ್ರಕ್ಷತೆ, ಋತ್ವಿಕ್ ಸಂಭಾವನೆ, ಪ್ರಸಾದ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಜರಗಲಿದ್ದು, ಸಮಸ್ತ ಸದ್ಭಕ್ತ ಬಾಂಧವರು ಆಗಮಿಸಿ ದುರ್ಗಾಪರಮೇಶ್ವರೀ ಮಾತೆಯ ಕೃಪೆಗೆ ಪಾತ್ರರಾಗುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ಬಿ. ಕೋಟ್ಯಾನ್ ಮತ್ತು ಸರ್ವ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್