Advertisement

ಮಲಾಡ್‌ ದುರ್ಗಾಪರಮೇಶ್ವರಿ ಮಂದಿರ: ವಾರ್ಷಿಕ ಪ್ರತಿಷ್ಠಾ ವರ್ಧಂತಿ

03:30 PM May 03, 2019 | Team Udayavani |

ಮುಂಬಯಿ: ಮಲಾಡ್‌ ಪೂರ್ವದ ತಾನಾಜಿ ನಗರದ ಕುರಾರ್‌ ವಿಲೇಜ್‌ನಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಮಂದಿರದ ಹನ್ನೆರಡನೆ ಪ್ರತಿಷ್ಠಾ ವರ್ಧಂತ್ಯುತ್ಸವವು ಇತ್ತೀಚೆಗೆ ಶ್ರೀ ದೇವಿ ಸನ್ನಿಧಿಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಸಮಿತಿಯ ಅಧ್ಯಕ್ಷ‌ ರಘುನಾಥ ಕೊಟ್ಟಾರಿ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ವಿದ್ವಾನ್‌ ಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಮತ್ತು ಮಂದಿರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್‌ ಸಾಂಪ್ರದಾಯಿಕ ಮತ್ತು ಧಾರ್ಮಿಕ ಪೂಜಾವಿಧಿಗಳನ್ನು ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ತೋರಣ ಮುಹೂರ್ತ, ಋತ್ವಿಗರಣೆ, ವಾಸ್ತು ಪೂಜಾ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಕಾ³ಲ ಬಲಿ, ಮಹಾಗಣಪತಿ ಹೋಮ, ಶ್ರೀದೇವಿ ಸನ್ನಿಧಿಯಲ್ಲಿ ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ನವಕ ಕಲಶ ಪ್ರಧಾನ, ಮಹಾಮಂತ್ರಕ್ಷತೆ, ಋತ್ವಿಕ್‌ ಸಂಭಾವನೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಇದರ ಉಪಾಧ್ಯಕ್ಷರುಗಳಾದ ಪದ್ಮನಾಭ ಟಿ. ಶೆಟ್ಟಿ, ಗಣೇಶ್‌ ಎಲ್‌. ಕುಂದರ್‌, ನರೇಶ್‌ ಆರ್‌. ಕೋಟ್ಯಾನ್‌, ಗೌರವ ಪ್ರಧಾನ ಕಾರ್ಯದರ್ಶಿ ಎಸ್‌. ಬಿ. ಕೋಟ್ಯಾನ್‌, ಗೌರವ ಕೋಶಾಧಿಕಾರಿ ಬಾಬು ಎಂ. ಸುವರ್ಣ, ಜತೆ ಕಾರ್ಯದರ್ಶಿ ಗೋಪಾಲ ಬಿ. ಕೋಟ್ಯಾನ್‌, ಜತೆ ಕೋಶಾಧಿಕಾರಿಗಳಾದ ದೇವು ಬಿ. ಕೋಟ್ಯಾನ್‌, ಸುರೇಶ್‌ ಎಂ. ಕೋಟ್ಯಾನ್‌, ಗೀತಾ ಸಿ. ಜತ್ತನ್‌, ವಿಶೇಷ ಆಮಂತ್ರಿತರು ಹಾಗೂ ಸಮಿತಿಯ ಸದಸ್ಯರು, ಸಲಹೆಗಾರರು ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿವಿಧ ಸೇವೆಗಳನ್ನು ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next