Advertisement

ನ್ಯೂಜೆರ್ಸಿಯಲ್ಲಿ ಮಲಬಾರ್‌ ಮಳಿಗೆ

11:25 PM Sep 09, 2019 | Lakshmi GovindaRaju |

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಚಿನ್ನಾಭರಣಗಳ ರಿಟೇಲ್‌ ಸಂಸ್ಥೆಗಳಲ್ಲಿ ಒಂದಾದ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆಯು ತನ್ನ 2023ರ ಜಾಗತಿಕ ವಿಸ್ತರಣಾ ಆಯೋಜನೆಯಡಿ ಯುಎಸ್‌ಎನಲ್ಲಿ ಎರಡನೇ ಮಳಿಗೆಯನ್ನು ಆರಂಭಿಸಿದೆ. ಜಾಗತಿಯವಾಗಿ ಅತ್ಯಂತ ಬಲಿಷ್ಠ ನೆಟ್‌ವರ್ಕ್‌ ನೊಂದಿಗೆ 250ಕ್ಕೂ ಅಧಿಕ ಮಳಿಗೆ ಹೊಂದಿರುವ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆಯು ಯುಎಸ್‌ಎನಲ್ಲಿ ತನ್ನ ಎರಡನೇ ಮಳಿಗೆಯನ್ನು ನ್ಯೂಜೆರ್ಸಿಯ ಇಸೆಲಿನ್‌ನಲ್ಲಿ ಆಗಸ್ಟ್‌ 31ರಂದು ತೆರೆದಿದೆ.

Advertisement

ನೂತನ ಮಳಿಗೆಯನ್ನು ನ್ಯೂಜೆರ್ಸಿಯ ಹುಡ್‌ಬ್ರಿಡ್ಜ್ ಟೌನ್‌ಶಿಪ್‌ನ ಮೇಯರ್‌ ಜಾನ್‌ ಮೆಕ್‌ಕೊರ್ಮೆಕ್‌ ಅವರು ಉದ್ಘಾಟನೆ ಮಾಡಿದರು. ಮಲಬಾರ್‌ ಗ್ರೂಪ್‌ ಮುಖ್ಯಸ್ಥ ಎಂ.ಪಿ.ಅಹಮ್ಮದ್‌, ಸಹಮುಖ್ಯಸ್ಥ ಡಾ.ಎ.ಪಿ.ಇಬ್ರಾಹಿಂ ಹಾಜಿ, ಗ್ರೂಪ್‌ನ ಕಾರ್ಯನಿರ್ವಹಾಕ ನಿರ್ದೇಶಕ ಕೆ.ಪಿ. ಅಬ್ದುಲ್‌ ಸಲಾಂ, ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನ‌ ಅಂತಾರಾಷ್ಟ್ರೀಯ ವ್ಯವಹಾರಗಳ ವ್ಯವ ಸ್ಥಾಪಕ ನಿರ್ದೇಶಕ ಶ್ಯಾಮ್‌ಲಾಲ್‌ ಹಮೀದ್‌, ಮಲ ಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನ‌ ಭಾರತದ ವ್ಯವ ಹಾರದ ವ್ಯವಸ್ಥಾಪಕ ನಿರ್ದೇಶಕ ಓ.ಆಶೇರ್‌, ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನ‌ ಯುಎ ವ್ಯವಹಾರಗಳ ಅಧ್ಯಕ್ಷ ಜೋಸೆಫ್ ಇಪೆನ್‌, ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನ‌ ವಿವಿಧ ನಿರ್ದೇಶಕರು, ನಿರ್ವಹಣಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.

ನ್ಯೂಜೆರ್ಸಿಯ ಇಸೆಲಿನ್‌ನ 1348 ಒಕ್‌ ಟ್ರೀ ರಸ್ತೆಯಲ್ಲಿ ನೂತನ ಮಳಿಗೆ ತೆರೆಯಲಾಗಿದೆ. 2018ರಲ್ಲಿ ಯುಎಸ್‌ಎನ ಚಿಕಾಗೋ ನಗರದ 2652 ವೆಸ್ಟ್‌ ಡೆವೊನ್‌ ಅವೆನ್ಯೂ, ಇಲಿನ್ಯಿಸ್‌ನಲ್ಲಿ ಮೊದಲ ಮಳಿಗೆಯನ್ನು ತೆರೆಯಲಾಗಿತ್ತು. ಸದ್ಯ ಮಲಬಾರ್‌ ಗ್ರೂಪ್‌ ಭಾರತ, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಯುಎಸ್‌ಎನಲ್ಲಿ ತನ್ನ ಔಟ್‌ಲೆಟ್‌ ನೆಟ್‌ವರ್ಕ್‌ ಹೊಂದಿದೆ. ಬಾಂಗ್ಲದೇಶ, ಶ್ರೀಲಂಕ, ಆಸ್ಟ್ರೇಲಿಯಾ, ಕೆನಡಾ, ಈಜಿಪ್ಟ್ ಮತ್ತು ಟರ್ಕಿ ಮೊದಲಾದ ಕಡೆಗಳಲ್ಲಿ ಮಳಿಗೆ ತೆರೆಯುವ ಯೋಜನೆಯೂ ಹೊಂದಿದೆ. ಸಂಸ್ಥೆಯ 2023ರ ಯೋಜನೆಯಡಿಯಲ್ಲಿ ಭಾರತ ಮತ್ತು ವಿದೇಶದಲ್ಲಿ ಮುಂದಿನ 6 ತಿಂಗಳಲ್ಲಿ 21 ಮಳಿಗೆ ತೆರೆಯಲುವ ಗುರಿ ಹೊಂದಿದೆ.

ಹೊಸ ಮಳಿಗೆಯಲ್ಲಿ ಉದ್ಘಾಟನೆಯ ನಿಮಿತ್ತ ಚಿನ್ನಾಭರಣ ಖರೀದಿಸುವವರಿಗೆ ವಿಶೇಷ ಆಫ‌ರ್‌ ಕೂಡ ಇರಲಿದೆ. ಹೊಸ ಮಳಿಗೆಯಲ್ಲಿ ಅತ್ಯಾಧುನಿಕ ವಿನ್ಯಾಸ ಮತ್ತು ಸಾಂಪ್ರದಾಯಿಕ ವಿನ್ಯಾಸದ ಜತೆಗೆ ಸಮಕಾಲೀನ ವಿನ್ಯಾಸದ ಚಿನ್ನಾಭರಣಗಳು ಲಭ್ಯವಿದೆ. ಗ್ರಾಕರು ತಮ್ಮ ಇಷ್ಟದ ವಿನ್ಯಾಸ ಮತ್ತು ಸೌಂದರ್ಯಕ್ಕೆ ಹೊಂದುವ ಚಿನ್ನಾಭರಣ ಕೊಳ್ಳುವ ಅವಕಾಶ ಇಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next